– ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾದ ಪುಣ್ಯ ನನ್ನದಾಯಿತು – ಹೆಚ್‌ಡಿಕೆ ಭಾವುಕ
ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿದ್ದು, ರಾಜ್ಯದ ನಾಯಕರೂ ಸಂತಸಗೊಂಡಿದ್ದಾರೆ.
ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್ ಮುಹೂರ್ತದಲ್ಲಿ (ಅಭಿಜಿತ್ʼ ಅಂದ್ರೆ `ವಿಜಯಶಾಲಿʼ ಎಂದರ್ಥ) ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ (Ramlalla Prana Pratistha) ನೆರವೇರಿಸಲಾಯಿತು. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ (Narendra Modi) ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿತು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ನಾಯಕರು ಶುಭ ಸಂದೇಶವನ್ನು ಹಂಚಿಕೊಂಡಿದ್ದಾರೆ.
Advertisement
Advertisement
ಹೆಚ್.ಡಿ ಕುಮಾರಸ್ವಾಮಿ:
ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದ ಪುಣ್ಯ ನನ್ನದಾಯಿತು. ಈ ದೈವ ಕಾರ್ಯದಲ್ಲಿ ಪೂಜ್ಯ ತಂದೆ-ತಾಯಿ ಅವರೊಂದಿಗೆ ಭಾಗವಹಿಸಿದ್ದು ನನಗೆ ಧನ್ಯತೆಯ ಅನುಭೂತಿ ನೀಡಿದೆ. ನಿಖಿಲ್ ಕುಮಾರಸ್ವಾಮಿ ಅವರು ಸಹ ಈ ದಿವ್ಯಕ್ಷಣಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ
Advertisement
ಬಿ.ವೈ ವಿಜಯೇಂದ್ರ:
ಕೋಟ್ಯಂತರ ಭಾರತೀಯರ ಆರಾಧ್ಯದೈವ ಪ್ರಭು ಶ್ರೀರಾಮಚಂದ್ರರ ಪ್ರಾಣಪ್ರತಿಷ್ಠಾಪನೆ ನೆರವೇರಿತು. ಪವಿತ್ರ ರಾಮಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮನ ಕೃಪೆ ದೇಶದ ಮೇಲಿರಲಿ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು, ಮೋಹನ್ ಭಾಗವತ್, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಸೇರಿದಂತೆ ಸಹಸ್ರಾರು ಸಾಧುಸಂತರ ಸಮಕ್ಷಮದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಧಿವಿಧಾನಗಳು ಯಶಸ್ವಿಯಾಗಿ ನೆರವೇರಿವೆ. ರಾಮಜ್ಯೋತಿ ಬೆಳಗಲಿ, ರಾಮ ನಾಮ ಮೊಳಗಲಿ, ರಾಮರಾಜ್ಯ ನಿರ್ಮಾಣವಾಗಲಿ, ಜೈ ಶ್ರೀರಾಮ್
Advertisement
ಬಿ.ಎಸ್ ಯಡಿಯೂರಪ್ಪ:
ಭಾರತೀಯರ ಆರಾಧ್ಯದೈವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಮತ್ತೆ ಅಯೋಧ್ಯೆಯ ರಾಮ ಜನ್ಮಭೂಮಿಯ ಪವಿತ್ರ ಸನ್ನಿಧಾನದಲ್ಲಿ, ಭವ್ಯ ಶ್ರೀರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಕೋಟ್ಯಂತರ ಭಕ್ತರ ಶತ ಶತಮಾನಗಳ ತಪಸ್ಸು ಇಂದು ಸಾಕಾರಗೊಂಡಿದೆ. ಈ ಕ್ಷಣದ ಸಾರ್ಥಕ ಅನುಭೂತಿಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಪ್ರಭು ಶ್ರೀರಾಮಲಲಾನ ಅನುಗ್ರಹ ಎಲ್ಲ ಭಕ್ತರ ಮೇಲೆ, ಭಾರತದೇಶದ ಮೇಲೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
ಆರ್.ಅಶೋಕ:
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ, ಭಾರತದ ಆತ್ಮ ಪ್ರತಿಷ್ಠೆಯ ಪುನಃಸ್ಥಾಪನೆ. ಅಯೋಧ್ಯೆಗೆ ಪ್ರಭು ಶ್ರೀರಾಮನ ಪುನರಾಗಮನ, ಸನಾತನ ಹಿಂದೂ ಧರ್ಮದ ಪುನರುತ್ಥಾನ. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ
ಬಿಜೆಪಿ ಕರ್ನಾಟಕ:
ರಾಮನ ಪಾದದ ಮೇಲಾಣೆ, ಮಂದಿರವಲ್ಲೇ ಕಟ್ಟುವೆವು ಎಂದಿದ್ದೆವು. ಅಸಂಖ್ಯ ರಾಮಭಕ್ತರ ಶತಮಾನಗಳ ಕನಸು ನನಸಾಗಿದೆ, ಮಂದಿರವಲ್ಲೇ ಕಟ್ಟಿದೆವು. ಇದನ್ನೂ ಓದಿ: ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು: ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಮಾತು