ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬಾಂಬರ್ ಯಾರು ಅಂತ ಒಂದು ಹಂತಕ್ಕೆ ಐಡೆಂಟಿಫೈ ಆಗಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಫೆ ಬಾಂಬ್ ಬ್ಲ್ಯಾಸ್ಟ್ ಪ್ರಕರನದ ವಿಚಾರವಾಗಿ ಪ್ರತಿಕ್ರಿಯಿಸಿದರು. ಬಹಳ ಹತ್ತಿರ ಹತ್ತಿರ ಬರುತ್ತಿದ್ದೇವೆ. ಆ ಮನುಷ್ಯ ಯಾರು ಅಂತ ಒಂದು ಹಂತಕ್ಕೆ ಐಡೆಂಟಿಫೈ ಆಗಿದೆ. ಅದನ್ನ ಕನ್ಪರ್ಮ್ ಮಾಡ್ಕೋಬೇಕು. ಅದನ್ನ ಸಿಸಿಸಿ, ಎನ್ ಐಎ ಅವರು ಮಾಡುತ್ತಿದ್ದಾರೆ. ಒಳ್ಳೆಯ ಲೀಡ್ ಸಿಕ್ಕಿದೆ ಎಂದು ತಿಳಿಸಿದರು.
ಹೆಗಡೆ ವಿರುದ್ಧ ಪಕ್ಷ ಕ್ರಮಕೈಗೊಳ್ಳಬೇಕು: ಪ್ರಧಾನಿಗಳು ಬಾಬಾ ಸಾಹೇಬ್ ಸಂವಿಧಾನ ಕೊಟ್ಟಿದ್ದನ್ನ ಶ್ಲಾಘನೆ ಮಾಡಿದ್ದಾರೆ. ಸಂವಿಧಾನ ಕೊಡದೇ ಹೋಗಿದ್ರೆ ನಾನು ಪ್ರಧಾನಿನೇ ಆಗ್ತಿರಲಿಲ್ಲ ಅಂದಿದ್ದಾರೆ. ಆದರೆ ಅವರ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲು ಮಾಡ್ತೀವಿ ಅಂತಿದ್ದಾರೆ. ಇದೇ ಮೊದಲಲ್ಲ. ಹಲವು ಬಾರಿ ಹೀಗೆ ಹೇಳಿದ್ದಾರೆ. ಅವರ ಪಕ್ಷವರು ಕ್ರಮ ತಗೋಬೇಕು. ಇಂತಹ ಘಟನೆ ಬಂದಾಗ ಅವರ ಹೇಳಿಕೆಯಿಂದ ದೂರ ಇದ್ದೆವೆ ಅಂದ್ರೆ ಸಾಲಲ್ಲ. ಮತ್ತೆ ಮತ್ತೇ ಹೇಳುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಆಗಬೇಕು. ಭಾರತದ ಸಂವಿಧಾನ ಬದಲಿಸುತ್ತೇವೆ ಅನ್ನೋದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
28 ಕ್ಷೇತ್ರಕ್ಕೂ ಅಭ್ಯರ್ಥಿ ಹಾಕ್ತೀವಿ: ಸಚಿವರು ಸ್ಪರ್ಧಿಸೋ ವಿಚಾರದ ಕುರಿತು ಮಾತನಾಡಿ, ಏಳೆಂಟು ಜನ ಸಚಿವರು ಸ್ಪರ್ಧಿಸಬೇಕು ಅಂತ ಮಾತುಕಥೆ ಇದೆ. ಪಕ್ಷದ ಹಿತದೃಷ್ಟಿಯಿಂದ ಯಾರು ಒಪ್ಕೊಂತಾರೆ ನೋಡಬೇಕು. ಸಂಜೆ ಅಷ್ಟೊತ್ತಿಗೆ ಗೊತ್ತಾಗುತ್ತೆ. 28 ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಹಾಕುತ್ತೇವೆ. ಎಚ್ ಸಿ ಮಹದೇವಪ್ಪ ಅವರು ನನಗೆ ಬೇಡ ಮಗನಿಗೆ ಕೊಡಿ ಅಂದಿದ್ದಾರೆ. ಬೇಡ ಅಂತ ಮೇಲೆ ಒತ್ತಾಯ ಮಾಡಿಕೊಡಲು ಆಗೋದಿಲ್ಲ. ಹೈಕಮಾಂಡ್ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.