ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwara, Cafe) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ಅಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ರಾಮೇಶ್ವರಂ ಕೆಫೆ ಸ್ಪೋಟದಲ್ಲಿ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಜೈಲಲ್ಲಿದ್ದ ಬಳ್ಳಾರಿ ಮಾಡ್ಯುಲ್ ಸಂಸ್ಥಾಪಕ ಮಿನಾಜ್ ನನ್ನು ಬಾಡಿ ವಾರೆಂಟ್ ಮೂಲಕ ಮಾರ್ಚ್ 9 ರವರೆಗೂ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆತನನ್ನು ಅಜ್ಞಾತ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹಾನಗಲ್ ಗ್ಯಾಂಗ್‌ರೇಪ್ ಕೇಸ್ – 58 ದಿನಗಳ ನಂತ್ರ 873 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
Advertisement
Advertisement
ಮಿನಾಜ್ ಸುಲೈಮನ್ ಜೊತೆ ಮುಂಬೈನ ಅನಾಸ್ ಇಕ್ಬಾಲ್, ದೆಹಲಿಯ ಶಯಾನ್ ರೆಹ್ಮಾನ್, ಬಳ್ಳಾರಿಯ ಸೈಯ್ಯದ್ ಸಮೀರ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿಯ ಸೈಯ್ಯದ್‌ನಿಂದ ತರಬೇತಿ ಪಡೆದವರಲ್ಲಿ ಒಬ್ಬ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ಕೆಫೆಯಲ್ಲಿ ಬಾಂಬ್ ಇಟ್ಟವನು ಅವನೇ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ನಾನಾ ಆಯಾಮಗಳಲ್ಲಿ ತನಿಖಾತಂಡಗಳು ತನಿಖೆ ನಡೆಸುತ್ತಿವೆ ಎಂಬುದಾಗಿ ತಿಳಿದುಬಂದಿದೆ.