ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast Case) ಪ್ರಕರಣವನ್ನು ಈಗಾಗಲೇ ಎನ್‌ಐಎ ತನಿಖೆ (NIA Investigation) ನಡೆಸುತ್ತಿದೆ. ಈ ನಡುವೆ ಸ್ಫೋಟಕ ವಿಚಾರವೊಂದು ಬೆಳಿಕಿಗೆ ಬಂದಿದೆ.
Advertisement
ಸ್ಫೋಟಕ್ಕೆ ಬಾಂಬ್ ತಯಾರಿನಿಂದ ಹಿಡಿದು ಆರೋಪಿ ಮಸಾವೀರ್ ಎಸ್ಕೇಪ್ (Mussavir Hussain) ಆಗುವವರೆಗಿನ ಇಂಚಿಂಚೂ ಸ್ಟೋರಿ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ. ಹೆಜ್ಜೆ ಹೆಜ್ಜೆಗೂ ಬಾಂಬರ್‌ಗಳ ಖತರ್ನಾಕ್ ಕೆಲಸ ಫೋಟೋಗಳಲ್ಲಿ ಅನಾವರಣಗೊಂಡಿದೆ. ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ – ದುಷ್ಕರ್ಮಿಯಿಂದ ಆಡಿಯೋ ಸಂದೇಶ
Advertisement
Advertisement
ಶಂಕಿತ ಉಗ್ರ ಮಾಡಿದ್ದೇನು?
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಆರೋಪಿ ಮುಸಾವೀರ್ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಿದ್ದ. ನಂತರ ಅಲ್ಲಿಂದ ಕೋಲ್ಕತ್ತಾದಲ್ಲಿ ತಲೆ ಮರೆಸಿಕೊಂಡಿದ್ದ, ಅದಕ್ಕಾಗಿ ಹಿಂದೂ ಹೆಸರು ಬಳಕೆ ಮಾಡಿದ್ದ. ಕ್ರಿಪ್ಟೋ ಕರೆನ್ಸಿಯನ್ನ ರೂಪಾಯಿ ಮಾಡಲು ಪ್ರಯತ್ನ ಸಹ ಮಾಡಿದ್ದ ಅನ್ನೋ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
Advertisement
ಈಗಾಗಲೇ ಬಾಂಬರ್ ಸೇರಿ ಹಲವು ಶಂಕಿತ ಉಗ್ರರನ್ನು ಬಂಧಿಸಿರುವ ಎನ್‌ಐಎ ಸ್ಥಳ ಮಹಜರು ಕೂಡ ನಡೆಸಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು – ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ: ಜನಾಕ್ರೋಶ