ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe Bomb Blast) ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು ವಿವಿಧ ಆಯಾಮಗಳಲ್ಲಿ ಪ್ರತ್ಯೇಕ ತಂಡ ಕೆಲಸ ಮಾಡುತ್ತಿದೆ.
ಸಾಧಾರಣವಾಗಿ ಉಗ್ರ ಸಂಘಟನೆಗಳು (Terrorism Organization) ಬಾಂಬ್ ಸ್ಫೋಟಿಸಿದರೆ ಈ ಕೃತ್ಯ ತಮ್ಮದು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತವೆ. ಆದರೆ ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆಗಳು ಈ ಕತ್ಯದ ಹೊಣೆಯನ್ನು ಒಪ್ಪಿಕೊಳ್ಳದ ಕಾರಣ Lone Wolf Terrorism ಎಂಬ ಮಾದರಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ
Advertisement
Advertisement
ಒಬ್ಬನೇ ವ್ಯಕ್ತಿ ಬಾಂಬ್ ತಯಾರಿಸಿ ಸ್ಪೋಟಿಸುವ ಸಂಪೂರ್ಣ ಜವಾಬ್ದಾರಿ ಹೊಂದಿದ್ದರೆ ಅದನ್ನು ʼಒಂಟಿ ತೋಳ ಭಯೋತ್ಪಾದಕ ʼ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಬೆಂಗಳೂರಿನಲ್ಲೂ ಊಗ್ರ ಈ ಮಾದರಿಯಲ್ಲೇ ಸ್ಫೋಟ ಮಾಡಿದ್ದಾನಾ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಹೋಟೆಲ್ ಉದ್ಯಮದಲ್ಲಿ ನಾವೆಲ್ಲ ಅಣ್ಣ-ತಮ್ಮಂದಿರು, ಅನ್ನ ನೀಡುತ್ತೇವೆ ಹೊರತು ಕಿತ್ತುಕೊಳ್ಳುವುದಿಲ್ಲ: ರಾಮೇಶ್ವರಂ ಕೆಫೆ ಮಾಲೀಕ
Advertisement
ಮಹಾರಾಷ್ಟ್ರ, ಕೇರಳ ಹಾಗೂ ತೆಲಂಗಾಣ ಎಟಿಸಿ ಸಂಪರ್ಕದಲ್ಲಿ ಬೆಂಗಳೂರು ಪೊಲೀಸರಿದ್ದಾರೆ. ಸದ್ಯ ಟೆಕ್ನಿಕಲ್ ಹಾಗೂ ಪೊಲೀಸರ ಯಾವುದೇ ಪ್ರಯತ್ನದಲ್ಲಿಯೂ ತಾನು ಸಿಗದಂತೆ ಪೂರ್ವನಿಯೋಜಿತನಾಗಿ ಬಾಂಬರ್ ಬಾಂಬ್ ಸ್ಫೋಟಿಸಿದ್ದಾನೆ.