– ಭೀಕರ ಶಬ್ಧ ಕೇಳಿಸಿದ ತಕ್ಷಣ ನಾನು ಪ್ರಜ್ಞೆ ಕಳೆದುಕೊಂಡೆ – ದೀಪಾಂಶು
ಬೆಂಗಳೂರು: ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟದಲ್ಲಿ (Rameshwaram Cafe Blast) ಗಾಯಗೊಂಡಿದ್ದ ಗಾಯಾಳು ದೀಪಾಂಶು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಶುಕ್ರವಾರ ಬ್ಲಾಸ್ಟ್ ಸಂಭವಿಸಿದ ವೇಳೆ ಗಾಯಗೊಂಡು ಕಿವಿ ಸಮಸ್ಯೆ ಅನುಭವಿಸಿದ್ದ ದೀಪಾಂಶು ಬ್ರೂಕ್‌ಫೀಲ್ಡ್ ಆಸ್ಪತ್ರೆಯಲ್ಲಿ (Brookefield Hospital) ಚಿಕಿತ್ಸೆ ಪಡೆದು, ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಅಮ್ಮ ಕಾಲ್ ಮಾಡದಿದ್ದರೆ…- ಕೆಫೆ ಬ್ಲಾಸ್ಟ್ ಭಯಾನಕ ಸತ್ಯ ಬಿಚ್ಚಿಟ್ಟ ಟೆಕ್ಕಿ
ಶುಕ್ರವಾರ ಬಾಂಬ್‌ಸ್ಫೋಟ ಸಂಭವಿಸುವುದಕ್ಕೂ ಮುನ್ನ ಹೋಟೆಲ್‌ಗೆ ಊಟಕ್ಕೆ ಬಂದಿದ್ದ ದೀಪಾಂಶು ಅಲ್ಲಿಯೇ ಲ್ಯಾಪ್‌ಟ್ಯಾಪ್ ಬ್ಯಾಗ್ ಮರೆತು ಹೋಗಿದ್ದರು. ಪುನಃ ಬ್ಯಾಗ್ ತೆಗೆದುಕೊಂಡು ಬರಲು ಹೋದಾಗ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟ ಪ್ರಕರಣ – ಇದುವರೆಗೆ ಯಾರನ್ನೂ ಬಂಧಿಸಿಲ್ಲ: ಪೊಲೀಸ್ ಆಯುಕ್ತ ಸ್ಪಷ್ಟನೆ
ಈ ಕುರಿತು `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಗಾಯಾಳು ದೀಪಾಂಶು, ಶುಕ್ರವಾರ ಮಧ್ಯಾಹ್ನ ಊಟಕ್ಕೆ ಹೋಗಿದ್ದೆ. ಊಟ ಮುಗಿಸಿ ಲ್ಯಾಪ್‌ಟಾಪ್ ಬ್ಯಾಗ್ ಅಲ್ಲೇ ಮರೆತು ಹೋಗಿದ್ದೆ. ತೆಗೆದುಕೊಳ್ಳಲು ವಾಪಸ್ ಬಂದಾಗ ಸ್ಫೋಟ ಸಂಭವಿತು, ನನಗೆ ದೊಡ್ಡ ಶಬ್ಧ ಕೇಳಿಸಿತು, ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದೆ, ಆಮೇಲೆ ಏನಾಯ್ತು ಅಂತ ಗೊತ್ತಿಲ್ಲ. ಯಾರೋ ಆಟೋದಲ್ಲಿ ಆಸ್ಪತ್ರೆಗೆ ಸೇರಿಸಿದರಂತೆ, ಸದ್ಯ ಚೇತರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತಿಬ್ಬರು ಇಂದೇ ಡಿಶ್ಚಾರ್ಜ್: ಇನ್ನೂ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ವೈದೇಹಿ ಆಸ್ಪತ್ರೆಯಲ್ಲಿ (Vydehi Hospital) ಚಿಕಿತ್ಸೆ ಪಡೆಯುತ್ತಿರುವ ಮತ್ತಿಬ್ಬರು ಗಾಯಾಳುಗಳು ಶನಿವಾರವೇ (ಮಾ.2) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ RSS ಮುಖಂಡನ ಹತ್ಯೆ; ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ದಕ್ಷಿಣ ಆಫ್ರಿಕಾದಲ್ಲಿ ಅರೆಸ್ಟ್