ನವದೆಹಲಿ: ದಿ ರಾಮೇಶ್ವರಂ ಕೆಫೆ (The Rameshwaram Cafe) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟೀಯ ತನಿಖಾ ದಳ (NIA) ಹುಬ್ಬಳ್ಳಿಯಲ್ಲಿ (Hubballi) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.
ಹುಬ್ಬಳ್ಳಿ ನಗರದ ನಿವಾಸಿ 35 ವರ್ಷದ ಶೋಯೆಬ್ ಅಹ್ಮದ್ ಮಿರ್ಜಾ ಅಲಿಯಾಸ್ ಛೋಟು (Shoaib Ahmed Mirza @ Chhotu) ಬಂಧಿತ ಆರೋಪಿ. ಈ ಮೂಲಕ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಹಿಂದೆ ಬೆಂಗಳೂರಿನನಲ್ಲಿ (Bengaluru) ನಡೆದ ಲಷ್ಕರ್ ತೊಯ್ಬಾ ಪಿತೂರಿ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲಿನಿಂದ ಹೊರ ಬಂದ ಬಳಿಕ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾನೆ.
ಈತನ ಪಾತ್ರ ಏನು?
ಈತ 2018 ರಲ್ಲಿ ಆರೋಪಿ ಅಬ್ದುಲ್ ಮಥೀನ್ ತಾಹಾನ ಜೊತೆ ಸ್ನೇಹ ಬೆಳೆಸಿ ವಿದೇಶದಲ್ಲಿರುವ ಆನ್‌ಲೈನ್ ಹ್ಯಾಂಡ್ಲರ್‌ಗೆ ಪರಿಚಯಿಸಿದ್ದ. ಹ್ಯಾಂಡ್ಲರ್ ಮತ್ತು ಮತೀನ್ ತಾಹ ನಡುವೆ ಎನ್ಕ್ರಿಪ್ಟೆಡ್ ಮೇಲ್ ಮುಖಾಂತರ ಅಹ್ಮದ್ ಮಿರ್ಜಾ ಸಂಪರ್ಕ ಸಾಧಿಸುತ್ತಿದ್ದ. ಇದನ್ನೂ ಓದಿ: ನಿಮ್ಮ ಪುತ್ರರನ್ನ Tomorrow Land ಪಾರ್ಟಿಗೆ ನೀವೇ ಕಳಿಸಿ ಅವರ ಸಾವಿಗೆ ಕಾರಣರಾದಿರಿ ಎಂದು ಕೇಳಿದರೆ ಹೇಗೆ: ಸಿದ್ದು ವಿರುದ್ಧ ಹೆಚ್‌ಡಿಕೆ ಅಟ್ಯಾಕ್
ಮಾರ್ಚ್ 1 ಎಂದು ರಂದು ನಡೆದ ನಡೆದ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯ ಚುರುಕಿನಿಂದ ನಡೆಯುತ್ತಿದೆ. ಇಲ್ಲಿಯವರೆಗೆ ದೇಶಾದ್ಯಂತ 29 ಸ್ಥಳಗಳಲ್ಲಿ ದಾಳಿ ನಡೆಸಿ ಎನ್‌ಐಎ ಶೋಧ ನಡೆಸಿದೆ.