ಕೋಲಾರ: ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ, ವಜಾಗೊಳಿಸಿ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹಿಸಿದ್ದಾರೆ.
ಕೋಲಾರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಅನ್ನೋದು ಗೌರಯುತವಾದ ಪದ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಕೂಡ ಈ ದೇಶದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ರೈಲ್ವೆ ಅಪಘಾತವಾದಾಗ ಅಷ್ಟು ಜನ ಮೃತಪಟ್ಟಿದ್ದರಿಂದ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು ಎಂದರು. ಇದನ್ನೂ ಓದಿ: ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ
Advertisement
Advertisement
ಯಶೋದಮ್ಮ ದಾಸಪ್ಪನವರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ರಾಜೀನಾಮೆ ಕೊಟ್ಟಿದ್ದರು. ಅಷ್ಟು ಗೌರವಯುತವಾದ ಪದವನ್ನ ಇವರಿಗೆ ಬಳಸುವುದು ಬೇಡ. ಇವರು ರಾಜೀನಾಮೆ ಅಲ್ಲ, ಡಿಸ್ಮಿಸ್ ಆಗಬೇಕು ಎಂದು ಆಗ್ರಹಿಸಿದರು. ಈಶ್ವರಪ್ಪ ರಾಜೀನಾಮೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ. ಅದನ್ನ ಬಿಡಿ ಬಿಡಿಯಾಗಿ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
Advertisement
ದೇಶದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಜೀವಂತವಿರುವ ವರೆಗೂ ಅವಕಾಶವಿಲ್ಲ. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಬಿಡುವುದಿಲ್ಲ. ನಾವು ಕಳೆದು ಹೋದ ಮೇಲೆ ಏನಾಗುತ್ತೋ ಗೊತ್ತಿಲ್ಲ. ಮಧ್ಯೆ ಪ್ರದೇಶ, ಬಿಹಾರ, ರಾಜ್ಯಗಳಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ
Advertisement
ಇನ್ನೂ ಯಾರು ಏನೇ ಪ್ರಯತ್ನ ಮಾಡಿದರು ಅಲ್ಪಸಂಖ್ಯಾತರು, ಧೀನ ದಲಿತರು, ಬಡವರನ್ನ ಗೌರವಯುತವಾಗಿ ಕರೆದುಕೊಂಡು ಹೋಗುತ್ತೇವೆ. ಪ್ರಾಣ ತ್ಯಾಗ ಮಾಡಲು ನಾವು ಮೊದಲು ನಿಂತಿರುತ್ತೇವೆ. ನಾವು ಸತ್ತರೆ ಅವರಿಗೇನಾದರು ತೊಂದರೆಯಾಗಬಹುದು. ನಾವು ಜೀವಂತವಿದ್ದರೆ ಅವರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.