ಕೋಲಾರ: ಕೆಪಿಎಂಇ ಮಸೂದೆಗೆ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಅರೋಗ್ಯ ಸಚಿವ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಡಿಸಿಸಿ ಬ್ಯಾಂಕ್ ನಿಂದ ಮಹಿಳಾ ಸಂಘಗಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣ ಖರ್ಚು ಮಾಡಿ ರೋಗಿಯ ಚಿಕಿತ್ಸೆ ಫಲಿಸದೆ ಪ್ರಾಣ ಹೋದಾಗ ಶವ ನೀಡಲು ಖಾಸಗಿ ಆಸ್ಪತ್ರೆಯವರು ಹಣ ಕೇಳ್ತಾರೆ. ಇತ್ತ ಹಣನೂ ಹೊಯ್ತು. ಜೀವವು ಹೋಯ್ತು. ಇದನ್ನ ಸರ್ಕಾರ ಅಂತಾ ಕರೆತ್ತೀವಾ? ಇದು ಒಂದು ರಾಜ್ಯನಾ? ಈ ಸೌಭಾಗ್ಯಕ್ಕೆ ನಾನು ಮಂತ್ರಿಯಾಗಿರಬೇಕಾ? ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಇದನ್ನೂ ಓದಿ: ಪ್ರತಿಭಟನೆಗೆ ಹೆದರಿ ಮಸೂದೆ ಹಿಂದಕ್ಕೆ ಪಡೆದ್ರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ: ರಮೇಶ್ ಕುಮಾರ್
Advertisement
Advertisement
ಇಂತಹ ನೋವನ್ನು ಕರ್ನಾಟಕದ ಆನೇಕ ಕುಟುಂಬಗಳು ಅನುಭವಿಸಿವೆ. ರೋಗಿಯನ್ನ ಬದುಕಿಸಿಕೊಳ್ಳಬೇಕು ಅಂತಾ ಪ್ರಾಣ ಒತ್ತೆ ಇಟ್ಟು ಸಾಲ ಮಾಡಿ ಭಿಕ್ಷೆ ಬೇಡಿ ಹಣ ಕೊಟ್ಟಿರುತ್ತೀರಾ. ಆದ್ರೆ ಶವದ ಎದುರು ಮೊದಲು ನಮ್ಮ ಹಣ ಕೊಡಿ ಎನ್ನುವುದು ಒಂದು ವೈದ್ಯ ವೃತ್ತಿನಾ? ದಯವಿಟ್ಟು ನಿಮ್ಮ ಕಾಲಿಗೆ ನಮಸ್ಕಾರ ಹಾಕುವೇ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ವೈದ್ಯ ವೃತ್ತಿಯ ಪಾವಿತ್ರತೆ ಕಾಪಾಡಿಕೊಳ್ಳಿ ಎಂದು ನೋವಿನಿಂದ ಸಚಿವರು ನುಡಿದರು.
Advertisement
ಇದನ್ನೂ ಓದಿ: ವಿಧೇಯಕ ಮಂಡನೆಯಾಗದಿದ್ರೆ ಸಚಿವ ಸ್ಥಾನದಲ್ಲಿ ಇರಲ್ಲ- ರಮೇಶ್ ಕುಮಾರ್
ಸೇವೆಯೋ? ವ್ಯವಹಾರವೋ?: ಖಾಸಗಿ ಆಸ್ಪತ್ರೆಗಳ ವಿರುದ್ಧ ರಮೇಶ್‍ಕುಮಾರ್ ಗರಂhttps://t.co/BcXJqRaof9#Bengaluru #HealthMinister #RameshKumar pic.twitter.com/QqG2Smfm4Q
— PublicTV (@publictvnews) January 10, 2017