– ಪ್ರತ್ಯೇಕ ವಾದ ಮಂಡನೆ ಮಾಡಿದ ಅಧಿಕಾರಿಗಳು
ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅರಣ್ಯ ಭೂಮಿ ವಿವಾದ ಸದ್ಯಕ್ಕೆ ಮುಕ್ತಾಯವಾಗಿದೆ. ಆದರೆ ಜಂಟಿ ಸರ್ವೆ ಕಾರ್ಯ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಮಧ್ಯೆ ಒಮ್ಮತ ಮೂಡಿಲ್ಲ.
Advertisement
ಕಂದಾಯ ಇಲಾಖೆ (Revenue Department) ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ. ಗಡಿ ಗುರುತಿಸಿ, ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದೇವೆ. ಬಳಿಕ ಅಲ್ಲಿಂದ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ ಎಂದು ವಾದ ಮಂಡನೆ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆ (Forest Department) ಒತ್ತುವರಿ ಆಗಿದೆ ಎಂಬ ವಾದ ಮಂಡನೆ ಮಾಡುವ ಮೂಲಕ ಹೊಸಹೂಡ್ಯ ಸರ್ವೆ ನಂ.1 ಮತ್ತು 2 ಸಂಪೂರ್ಣ ಅರಣ್ಯ ಭೂಮಿ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ. ಡಿಡಿಎಲ್‌ಆರ್ ನೀಡುವ ನಕ್ಷೆಯಲ್ಲಿ ಅರಣ್ಯ ಭೂಮಿ ತೋರಿಸದಿದ್ದರೆ ನಾನು ಸಹಿ ಹಾಕುವುದಿಲ್ಲ ಎಂದು ಡಿಸಿಎಫ್ ಸರೀನಾ ವಾದ ಮಂಡನೆ ಮಾಡಿದರು. ಇದನ್ನೂ ಓದಿ: ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅಸ್ತು
Advertisement
Advertisement
Advertisement
ಹೈಕೋರ್ಟ್ ನಿರ್ದೇಶನದ ಮೇರೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹೂಡ್ಯ ಸರ್ವೆ ನಂ 1 ಮತ್ತು 2 ಜಮೀನನ್ನು ಎರಡು ದಿನಗಳ ಕಾಲ ನಡೆಸಿದ ಸರ್ವೆ ಕಾರ್ಯ ಮುಕ್ತಾಯವಾಯಿತು. ಇದೇ ವೇಳೆ ಮಾತನಾಡಿದ ಕೋಲಾರ ಜಿಲ್ಲಾಧಿಕಾರಿ ಡಾ.ರವಿ, ಹೈಕೋರ್ಟ್ ಸೂಚನೆ ಪ್ರಕಾರ ಜಂಟಿ ಸರ್ವೆ ಮಾಡಲಾಗಿದೆ. ಹೊರ ಭಾಗದ ಕಂದಾಯ ಗ್ರಾಮದ ಗುರುತು ಮಾಡಲಾಗಿದೆ. ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೆ ಮಾಡಲಾಗಿದೆ. ಅರಣ್ಯ ಇಲಾಖೆಯ ಗಡಿ ಗುರುತಿಸುವ ಕೆಲಸ ಜಂಟಿಯಾಗಿ ಮಾಡಿ ನಾಲ್ಕು ತಂಡಗಳಿಂದ ಸರ್ವೆ ಮಾಡಿ, ಸರ್ವೆ ನಂಬರ್‌ನ ಜಮೀನನ್ನು ಸೆರೆ ಹಿಡಿಯಲಾಗಿದೆ ಎಂದರು. ಇದನ್ನೂ ಓದಿ: Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ
ಅರಣ್ಯ ಇಲಾಖೆಯ ಗಂಟರ್ಸ್ ಚೈನ್ ಮಾಪನ 100 ಲಿಂಕ್ 66 ಅಡಿ, ಕಂದಾಯ ಇಲಾಖೆಯ ಚೈನ್‌ನಲ್ಲಿ 50 ಲಿಂಕ್ಸ್ 30 ಅಡಿಯಾಗಿದೆ. ಸರ್ವೆ ನಂಬರ್ 1 ರಲ್ಲಿ 315 ಎಕರೆ ಹಾಗೂ ಸರ್ವೆ ನಂಬರ್ 2ರಲ್ಲಿ 113 ಎಕರೆ ಗುರುತಿಸಲು ನೋಟಿಫಿಕೇಶನ್ ಇದೆ. ಡಿಡಿಎಲ್‌ಆರ್ ನಮಗೆ ತಾಂತ್ರಿಕ ವರದಿ ನೀಡಬೇಕಿದೆ. ಪಿರ್ಯಾದುದಾರರು ಸಹ ಕೆಲವು ಮಾಹಿತಿ ಕೇಳಿದ್ದಾರೆ. ಅದರ ಮಾಹಿತಿ ಪಡೆಯಬೇಕಿದೆ. ಜ.30ರ ಒಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸುತ್ತೇವೆ. 1934ರ ಸರ್ಕಾರಿ ನೋಟಿಫಿಕೇಶನ್ ಹಾಗೂ 1944ರ ಗೆಜೆಟ್ ಬಿಟ್ಟು ಅರಣ್ಯ ಇಲಾಖೆಯವರು ಯಾವುದೇ ದಾಖಲೆ ಕೊಟ್ಟಿಲ್ಲ. ಮೇಲ್ನೋಟಕ್ಕೆ ನಮಗೆ ಏನೂ ಕಂಡು ಬಂದಿಲ್ಲ ಅನಿಸುತ್ತೆ ಎಂದು ಹೇಳಿದರು. ಇದನ್ನೂ ಓದಿ: ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್
ಇನ್ನೂ ಅರಣ್ಯ ಇಲಾಖೆಗೆ ಸೇರಿದ ಜಾಗ ಒತ್ತುವರಿ ಆಗಿದೆ ಎಂದು ಮತ್ತೆ ವಾದ ಮಾಡಿದ ಅರಣ್ಯ ಇಲಾಖೆ ಡಿಸಿಎಫ್, ಗುಂಟರ್ಸ್ ಚೈನ್ ಬ್ರಿಟಿಷ್ ಕಾಲದಿಂದ ಬಳಕೆ ಆಗುತ್ತಿದೆ. ಇದರಲ್ಲಿ ಅಳತೆ ಸರಿಯಾಗಿ ಇರುತ್ತೆ ಎಂದು ಅಧೀನ ಕಾರ್ಯದರ್ಶಿ ಅವರೇ ಹೇಳಿದ್ದಾರೆ. ಹಾಗಾಗಿ ಅದರಲ್ಲಿ ಅಳತೆ ಮಾಡಿದ್ದೇವೆ, ಸರಿ ಇದೆ. ಹೊಸಹೂಡ್ಯಾ ಗ್ರಾಮದ ಸರ್ವೆ ನಂಬರ್ 1 ಹಾಗೂ 2 ರಲ್ಲಿ ನಮ್ಮ ಭೂಮಿ ಒತ್ತುವರಿ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ – ದೆಹಲಿ ಚುನಾವಣೆಗೆ `ಕೈ’ ಗ್ಯಾರಂಟಿ
ಅರಣ್ಯ ಸೆಟಲ್ಮೆಂಟ್ ಮ್ಯಾಪ್ ನಮ್ಮ ಬಳಿ ಇದೆ. ಈಗ ಬೇಕಾದರೂ ನಾವು ಮ್ಯಾಪ್ ಸಿದ್ಧಪಡಿಸಬಹುದು. ಇಲ್ಲಿ ಒತ್ತುವರಿ ಆಗಿರೋದು ನಿಜ. ಸರ್ವೆ ನಂಬರ್ 1ರಲ್ಲಿ 315.32 ಎಕರೆ, ಸರ್ವೆ ನಂಬರ್ 2ರಲ್ಲಿ 113 ಎಕರೆ ಇದೆ. 1944ರಲ್ಲೇ ಗಡಿ ಗುರುತು ಆಗಿದೆ. ನಮಗೆ ಸರ್ವೆ ನಂಬರ್ 1 ಹಾಗೂ 2ರಲ್ಲಿರುವ ನಮ್ಮ ಅರಣ್ಯ ಇಲಾಖೆಯ ಜಾಗ ಸೇರಿಸಿದರೇ ಮಾತ್ರ ಸಹಿ ಹಾಕುತ್ತೇನೆ. ಇಲ್ಲವಾದರೆ ನಾನು ಡಿಡಿಎಲ್‌ಆರ್ ವರದಿಗೆ ಸಹಿ ಹಾಕೋದಿಲ್ಲ, ಮತ್ತೆ ಸರ್ವೆ ಆಗಲಿ ಬಿಡಿ ಎಂದರು. ಇದನ್ನೂ ಓದಿ: ಯಕ್ಷಗಾನದ ಟೆಂಟ್‌ಗೆ ನುಗ್ಗಿದ ಪೊಲೀಸರು – ಈಗ ಕಾಂಗ್ರೆಸ್ Vs ಬಿಜೆಪಿ ಜಟಾಪಟಿ