ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರೊಬ್ಬರು ಪೊಲೀಸ್ ಹಾಗೂ ಬಿಜೆಪಿ ಮುಖಂಡನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಚೆಯ ನೆಹರು ನಗರದಲ್ಲಿ ನಡೆದಿದೆ.
ರಮೆಶ್ ಜಾರಕಿಹೊಳಿ ಅವರ ಆಪ್ತ ಸಾವಿಯೋ ಪಿಳೈ(28) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕ್ಯಾಂಪ್ ಠಾಣೆಯ ಪಿಎಸ್‌ಐ, ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
Advertisement
Advertisement
ಕ್ಯಾಂಪ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರ ಜೊತೆ ಸಾವಿಯೋ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಇಬ್ಬರ ಮಧ್ಯೆ ಮನಸ್ತಾಪವಾಗಿ, ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಇದನ್ನೂ ಓದಿ: ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್
Advertisement
Advertisement
ಬಿಜೆಪಿ ಮುಖಂಡ ಪೃಥ್ವಿ ಸಿಂಗ್, ಪಿಎಸ್‌ಐ ಸೇರಿ 1.50 ಲಕ್ಷ ರೂ. ಹಣ ಪಡೆದಿದ್ದರು. ಅಲ್ಲದೇ ಇನ್ನೂ ಹೆಚ್ಚು ಹಣ ನೀಡುವಂತೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಸಾವಿಯೋ ಪಿಳೈ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ