ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಇನ್ನಷ್ಟು ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆದಿದ್ಯಾ? ರಮೇಶ್ ಜಾರಕಿಹೊಳಿಯೇ ತನ್ನ ವಿರುದ್ಧ ಆಡಿಯೋ (Audio) ರಿಲೀಸ್ ಆಗುತ್ತೆ ಎಂಬ ಹೇಳಿಕೆಯ ಬಗ್ಗೆ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆ ಆಗ್ತಿದೆ.
Advertisement
ಕಿತ್ತೂರು ಚೆನ್ನಮ್ಮ ಬಗ್ಗೆ ನಾನು ಮಾತನಾಡಿರುವುದು ಬೇರೆ, ಆದ್ರೆ ಅದನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಆಡಿಯೋ ಬಿಡುಗಡೆ ಮಾಡ್ತಾರೆ. ಕಟ್ ಆಂಡ್ ಪೇಸ್ಟ್ ಮಾಡಿ ರಿಲೀಸ್ ಮಾಡ್ತಾರೆ. ವಿರೋಧಿ ಪಡೆ ತಂತ್ರ ನನಗೆ ಗೊತ್ತು ಅಂತಾ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ – `ವಿಷಕನ್ಯೆ’ ಪದ ಬಳಕೆಗೆ ಹೆಬ್ಬಾಳ್ಕರ್ ಸಹೋದರ ಖಂಡನೆ
Advertisement
Advertisement
ಅಂದಹಾಗೆ ಚುನಾವಣೆ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ಸಿಡಿ ಬಾಂಬ್ (CD Bomb), ಆಡಿಯೋ ಬಾಂಬ್ ಶುರುವಾಗುವ ಸುಳಿವು ಸಿಕ್ಕಿದೆ. 129 ಸಿಡಿಗಳು ಇವೆ ಎಂದು ಡಿಕೆಶಿಗೆ (D.K Shivakumar) ಪೊಲಿಟಿಕಲ್ ಬಾಂಬ್ ಫಿಕ್ಸ್ ಮಾಡಿದ್ದಾರೆ ರಮೇಶ್ ಜಾರಕಿಹೊಳಿ. ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ರಮೇಶ್ ಜಾರಕಿಹೊಳಿಯ ದಾಖಲೆ ಅಸ್ತ್ರ ಸಿಡಿಯುತ್ತಾ? ಠುಸ್ ಆಗುತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ಇದನ್ನೂ ಓದಿ: ಬಿಜೆಪಿಗೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಮಕ್ಕಳು ಬರ್ತಾರೆ: ಕಟೀಲ್
Advertisement
ಈ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ಕೂಡ ರಮೇಶ್ ಜಾರಕಿಹೊಳಿ ವಿರುದ್ಧ ಇನ್ನಷ್ಟು ಆಡಿಯೋ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದು, ಚುನಾವಣೆ ಘೋಷಣೆಗೂ ಮುನ್ನ ಅಥವಾ ಚುನಾವಣೆ ಘೋಷಣೆ ಬಳಿಕ ಆ ಅಸ್ತ್ರಗಳನ್ನು ಪ್ರಯೋಗ ಮಾಡುವ ಸಾಧ್ಯತೆ ಇದೆ. ಹಾಗಾಗಿ ಎರಡು ಬಣಗಳಿಂದ ಸಾಕ್ಷಿ ಗುದ್ದಾಟ, ಮರ್ಯಾದೆ ತೆಗೆಯುವ ಆಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣ್ತಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k