ಬೆಂಗಳೂರು: ಬೆಳಗಾವಿ ಸಾಹುಕಾರ, ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರಕ್ಕೂ ಕಂಟಕವಾಗ್ತಾರಾ ಅನ್ನೋ ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದೆ. ರಮೇಶ್ ಜಾರಕಿಹೊಳಿ ಮಾತನ್ನು ಕೇಳಿದ ಕೇಸರಿ ನಾಯಕರು ದಿಗ್ಭ್ರಾಂತಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತ್ಯಾಗದ ಮಾತು: ಇಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸೇರಿದಂತೆ ಎಲ್ಲ 15 ಜನರ ತ್ಯಾಗದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಮುಂದಿನ ದಿನಗಳಲ್ಲಿ ಮಹೇಶ್ ಕುಮಟಳ್ಳಿ ಉನ್ನತ ಸ್ಥಾನ ಸಿಗಬಹುದು. ರಮೇಶ್ ಜಾರಕಿಹೊಳಿ ನನ್ನನ್ನು ಅರ್ಧದಲ್ಲೇ ಕೈ ಬಿಟ್ಟರು ಅಂತಾ ಹೇಳಿದ್ರೆ ನನ್ನ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮಹೇಶ್ ಕುಮಟಳ್ಳಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಸ್ನೇಹಿತನಿಗಾಗಿ ರಮೇಶ್ ಜಾರಕಿಹೊಳಿ ತ್ಯಾಗದ ಮಾತುಗಳನ್ನಾಡಿದ್ದಾರೆ.
Advertisement
Advertisement
ಉಪಚುನಾವಣೆಯಲ್ಲಿ ಗೆದ್ದ 12 ಶಾಸಕರ ಪೈಕಿ 10 ಜನಕ್ಕೆ ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ನಿಂದ ಬಂದು ಉಪ ಚುನಾವಣೆಯಲ್ಲಿ ಗೆದ್ದರೂ ಮಹೇಶ್ ಕುಮಟಳ್ಳಿಯವರನ್ನ ಕೈ ಬಿಡಲಾಗಿತ್ತು. ಇನ್ನು ಮೂಲ ಬಿಜೆಪಿ ಶಾಸಕರು ಸಚಿವ ಸ್ಥಾನ ಸಿಗದಕ್ಕೆ ಅಸಮಾಧಾನಗೊಂಡಿದ್ದು, ರಹಸ್ಯವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ತಮ್ಮ ಜೊತೆಯಲ್ಲಿಯೇ ಬಿಜೆಪಿ ಬಂದಿರುವ ಮಹೇಶ್ ಕುಮಟಳ್ಳಿ ಸಚಿವ ಸ್ಥಾನ ನೀಡಬೇಕೆಂದು ಬಿಜೆಪಿಗೆ ರಮೇಶ್ ಜಾರಕಿಹೊಳಿ ಸಂದೇಶವನ್ನು ರವಾನಿಸಿದೆ. ಇದನ್ನೂ ಓದಿ: ಮಾತು ತಪ್ಪದ ಯಡಿಯೂರಪ್ಪ ಮಾತು ತಪ್ಪಿ ಬಿಟ್ರಾ?