ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಪಾಪ ಸತ್ಯ ಒಪ್ಪಿಕೊಂಡಿದ್ದಾನೆ. ಅವನಿಗೆ ತಪ್ಪಿನ ಅರಿವಾಗಿದೆ. ಇಂತಹ ಸಿಡಿಗಳು ಇದ್ರೆ ಕೋವಿಡ್ (Covid-19) ಬರಲ್ಲ, ಅತಿವೃಷ್ಟಿ ಬರಲ್ಲ, ದರಿದ್ರ ಬರುತ್ತದೆ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ.ಇಬ್ರಾಹಿಂ (CM Ibrahim) ಎರಡೂ ಪಕ್ಷಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮಧ್ಯೆ ಸಿಡಿ ವಾರ್ ವಿಚಾರಕ್ಕೆ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವು ರಾಷ್ಟ್ರೀಯ ಪಕ್ಷಗಳಾ? ನನಗೆ ಮಕ್ಕಳು ಕೇಳುತ್ತಿದ್ದಾರೆ ಸಿಡಿ ಅಂದ್ರೆ ಏನು? ಅದರಲ್ಲೇನಿದೆ ಅಂತಾ? ನಾನು ಏನು ಹೇಳಲಿ ಮಕ್ಕಳಿಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಂದು ಶಂಕುಸ್ಥಾಪನೆ, ಫೆ.6ಕ್ಕೆ ಮೋದಿಯಿಂದ ಉದ್ಘಾಟನೆ – ತುಮಕೂರು HAL ಹೆಲಿಕಾಪ್ಟರ್ ಘಟಕದ ವಿಶೇಷತೆ ಏನು?
ಇವು ರಾಷ್ಟ್ರೀಯ ಪಕ್ಷಗಳಾ? ಮೇಲೆ ಇರೋರಿಗೆ ಮರ್ಯಾದೆ, ಬುದ್ಧಿ ಇಲ್ವಾ? ಅವನು ಹೇಳ್ತಾನೆ ವಿಷಕನ್ಯೆ, ಇವನು ಹೇಳ್ತಾನೆ ನಾಗಕನ್ಯೆ. ಇದು ಏನ್ರಿ ಇದು? ಡಿಕೆಶಿ ಹೇಳೋದು ಸತ್ಯನಾ? ರಮೇಶ್ ಹೇಳೋದು ಸತ್ಯನಾ? ಸಿಬಿಐ (CBI) ತನಿಖೆ ಆಗಲಿ ಅಂತಾ ಜನ ಕೇಳುತ್ತಿದ್ದಾರೆ. ಕುಂದನಗರಿ, ಬಸವಾದಿ ಶರಣರಿಗೆ ಸೂಫಿ ಸಂತರಿಗೆ ಜನ್ಮ ಕೊಟ್ಟ ಬೆಳಗಾವಿ ಜಿಲ್ಲೆ ಸಜ್ಜನರು, ಮರ್ಯಾದಸ್ಥ ನಾಯಕರನ್ನು ಕೊಟ್ಟ ಊರಾಗಿದೆ. ಈ ರಾಜ್ಯದಲ್ಲಿ ಸಿಡಿ ಬಗ್ಗೆ ಚರ್ಚೆ ಆಗುತ್ತಿದೆ. ಮತದಾರರಿಗೆ ಕೈ ಮುಗಿದು ಹೇಳ್ತೇನೆ ಮರ್ಯಾದೆ ಉಳಿಸಬೇಕು. ಸಂಸ್ಕೃತಿ ಉಳಿಸಿಕೊಳ್ಳಿ ಇವರನ್ನು ಹೊರಗೆ ಹಾಕಬೇಕು ಎಂದು ಮನವಿ ಮಾಡಿಕೊಂಡರು.
ಸಿಡಿ ಪ್ರಕರಣ (CD Case) ಸಿಬಿಐ (CBI) ತನಿಖೆಗೆ ನೀವೂ ಆಗ್ರಹಿಸುತ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಒತ್ತಾಯ ಮಾಡೋದು ಏನ್ರಿ ಇವರಿಗೆ ಮರ್ಯಾದೆ ಇದ್ರೆ ಮಾಡಲಿ. ಇಲ್ಲ ಜನರೇ ಇವರನ್ನು ಹೊರಗೆ ಹಾಕ್ತಾರೆ. ಕೋರ್ಟ್‍ನಲ್ಲಿ ಹೋಗಿ ಸಿಡಿ ತೋರಿಸಬಾರದು ಅಂತಾ ಸ್ಟೇ ತಂದಿದ್ದಾರೆ. ಸದಾನಂದಗೌಡರು ಸೇರಿ 12 ಜನ ಮಂತ್ರಿಗಳು ಸ್ಟೇ ತಂದಿದ್ದಾರೆ. ಇಂತಹ ಮಂತ್ರಿಗಳು, ಇಂತಹ ಸಿಡಿಗಳು ಇದ್ರೆ ಕೋವಿಡ್ ಬರಲ್ಲ, ಅತಿವೃಷ್ಟಿ ಬರಲ್ಲ, ದರಿದ್ರ ಬರುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಳ್ಳಾರಿ ನೆಲದಲ್ಲಿ ರೆಡ್ಡಿ ಬ್ರದರ್ಸ್ ಬ್ಯಾಟಲ್ – ರಿಯಲ್ಲಾ?ಗೇಮ್ ಪ್ಲಾನಾ?
ಸಿಡಿ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ರಾಜಕಾರಣ ಎಷ್ಟರ ಮಟ್ಟಿಗೆ ಸರಿ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಪಾಪ ರಮೇಶ್ ಜಾರಕಿಹೊಳಿ ಸತ್ಯ ಹೇಳಿದ್ದಾನೆ. ಡಿ.ಕೆ.ಶಿವಕುಮಾರ್‌ರದ್ದು ಒಬ್ಬರದ್ದೇ ಏಕೆ ಹೇಳ್ತೀರಿ ಇನ್ನೂ ಅನೇಕರಿದ್ದಾರೆ. ಇವರು ಅದೇ ಕೆಟಗರಿಯಿಂದ ಬಂದಿದ್ದಾರೆ. ರಮೇಶ್ ಪಾಪ ಸತ್ಯ ಒಪ್ಪಿಕೊಂಡಿದಾನೆ. ತಪ್ಪಿನ ಅರಿವಾಗಿದೆ. ಅವನಿಗೆ ಧನ್ಯವಾದ. ಕಿತ್ತೂರು ಚೆನ್ನಮ್ಮ ಪರಂಪರೆ ಕುಟುಂಬ ಅಂತಾ ಹೇಳುವ ಅರ್ಹತೆ ಯಾರಿಗೂ ಇಲ್ಲ. ಆ ನನ್ನ ತಾಯಿ ಕಿತ್ತೂರು ಚೆನ್ನಮ್ಮರನ್ನು ಪೂಜ್ಯತಾ ಭಾವದಿಂದ ಕಾಣುತ್ತೇವೆ. ದಯವಿಟ್ಟು ಆ ತಾಯಿಯ ಹೆಸರು ದುರುಪಯೋಗ ಪಡಿಸಿಕೊಳ್ಳಬೇಡಿ. ದುರುಪಯೋಗ ಪಡಿಸಿಕೊಂಡರೇ ನಾನೇ ಕೋರ್ಟ್‍ಗೆ ಹಾಕಬೇಕಾಗುತ್ತದೆ ಎಂದು ಕಿಡಿಕಾರಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k