– ಜಾರಕಿಹೊಳಿ ಕುಟುಂಬದ ನಡುವೆಯೇ ವಾರ್ ಫಿಕ್ಸ್
ಬೆಳಗಾವಿ: ಜಿಲ್ಲೆಯಲ್ಲಿ ಮುಂದೆ ಬರಲಿರುವ ಉಪಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯಾರಿಗೆ ಪಕ್ಷದ ಟಿಕೆಟ್ ಲಭಿಸಲಿದೆ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶೀಘ್ರವೇ ನಾವು ಕೂಡ ಕ್ಷೇತ್ರದಲ್ಲಿ ಸಮಾವೇಶ ನಡೆಸುತ್ತೇವೆ. ಈಗ ಪ್ರವಾಹ ಪರಿಸ್ಥಿತಿ ಇರುವುದರಿಂದ ಜನರ ಸಮಸ್ಯೆಗಳಿಗೆ ಸಹಾಯ ಮಾಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹೋದರ ರಮೇಶ್ ಜಾರಕಿಹೊಳಿ ಅವರು ನಡೆಸುತ್ತಿರುವ ಸಮಾವೇಶ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪ್ರವಾಹದಿಂದ ಜನರು ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಅವರು ಮುಂಬೈನಲ್ಲಿ ಕುಳಿತಿದ್ದರು. ಈಗ ಸಮಾವೇಶ ನಡೆಸುತ್ತಿದ್ದಾರೆ. ನಾವು ಜನರಿಗೆ ಸಹಾಯ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದರು.
Advertisement
Advertisement
ನಿನ್ನೆಯಷ್ಟೇ ಸತೀಶ್ ಜಾರಕಿಹೊಳಿ ಅವರನ್ನು ಧಾರವಾಡಕ್ಕೆ ಸೇರಿಸಬೇಕು ಎಂದು ವ್ಯಂಗ್ಯವಾಡಿದ್ದ ರಮೇಶ್ ಜಾರಕಿಹೊಳಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸತೀಶ್ ಅವರು, ರಮೇಶ್ ಅವರು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಕೂಡ ಅವರು ಸೀರಿಯಸ್ ರಾಜಕಾರಣಿಯಲ್ಲ. ಇಲ್ಲಿ ಜಾತಿ ವ್ಯವಸ್ಥೆ, ಹಣ ಬಲ ಸೇರಿದಂತೆ ಸೂಕ್ತ ಎದುರಾಳಿ ಇಲ್ಲದ ಕಾರಣ ಸುಲಭವಾಗಿ ಶಾಸಕರಾಗಿ ಆಯ್ಕೆಯಾಗಬಹುದು. ಆದರೆ ಜನರ ಸಮಸ್ಯೆ, ಭಾವನೆಗಳಿಗೆ ಬೆಲೆ ನೀಡುವ ಮನಸ್ಸು ಅವರಿಗೆ ಇಲ್ಲ ಎಂದರು. ಇದನ್ನು ಓದಿ: ಸತೀಶ್ ಜಾರಕಿಹೊಳಿರನ್ನ ಧಾರವಾಡಕ್ಕೆ ಸೇರಿಸ್ಬೇಕು
Advertisement
ಯಾರು ಬೇಕಾದರು ಶಾಸಕರಾಗಿ ಕೆಲವು ಕ್ಷೇತ್ರಗಳಲ್ಲಿ, ಅದರಲ್ಲೂ ಗೋಕಾಕ್ ನಂತಹ ಕ್ಷೇತ್ರಗಳಲ್ಲಿ ಆಯ್ಕೆಯಾಗಬಹುದು. ಆದರೆ ಅವರಿಗೆ ಜನರ ನೋವಿಗೆ ಸ್ಪಂದಿಸುವ ಮನಸ್ಸಿಲ್ಲ. ಜನರ ಪರ ಇರಬೇಕಾದ ಸಂದರ್ಭದಲ್ಲಿ ದೆಹಲಿ, ತೀರ್ಥಯಾತ್ರೆಗೆ ತೆರಳಿದ್ದರು. ಅವರು ಸೀರಿಯಸ್ ರಾಜಕಾರಣಿಯೇ ಅಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ, ಈಗಲೂ ಹೇಳುತ್ತೇನೆ. ಇಂದು ನಡೆದ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೆರಳಿಲ್ಲ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಪ್ರತ್ಯೇಕ ಕಾರ್ಯಕರ್ತರು ಇದ್ದಾರೆ ಎಂದರು. ಇದನ್ನು ಓದಿ: ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಅವರಿಗಾಗಿ ಹೋರಾಡುತ್ತೇನೆ: ರಮೇಶ್ ಜಾರಕಿಹೊಳಿ