ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಕುಮಾರಸ್ವಾಮಿ ಅವರಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ.
ನಿಮ್ಮ ಸಮುದಾಯದ ನಾಯಕರಿಂದ ಜಿಲ್ಲೆಯಲ್ಲಿ ಕೋಲಾಹಲ ಎದ್ದಿದ್ದು, ಇಡೀ ಸರ್ಕಾರ ಒಬ್ಬರು-ಇಬ್ಬರ ಅಣತಿಯಂತೆ ನಡೆಯುವುದಾದ್ರೆ ನಾವ್ಯಾಕೆ ಇರಬೇಕು?ನಮ್ಮ ಜಿಲ್ಲೆಯಲ್ಲಿ ಡಿಕೆಶಿ ಮೂಗು ತೂರಿಸುವುದಾದ್ರೆ ನಾವ್ಯಾಕೆ ಸುಮ್ಮನಿರಬೇಕು ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ನಿಮ್ಮ ಸಮುದಾಯದ ನಾಯಕ ನಿಮ್ಮನ್ನು ಸಂಧಾನಕ್ಕೆ ಕಳುಹಿಸಿದ್ರಾ ಎಂದು ಪ್ರಶ್ನಿಸಿ ನಿಮ್ಮ ನಾಯಕನಿಂದಾಗಿ ಪಿಎಲ್‍ಡಿ ಎಲೆಕ್ಷನ್‍ನಲ್ಲಿ ಮುಖಭಂಗ ಅನುಭವಿಸುವಂತಾಯ್ತು. ಬೆಳಗಾವಿ ವಿಚಾರದಲ್ಲಿ ತಲೆದೂರಿಸಿದ್ರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
Advertisement
ಬಳ್ಳಾರಿ ಉಸ್ತುವಾರಿ ಬಿಡಲು ನೀವೇ ನಿಮ್ಮ ಸಮುದಾಯದ ಬಂಧುವಿಗೆ ಹೇಳಿ. ನಾವು ಬೆಳೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ನಮಗೆ ಅಡ್ಡಗಾಲಾದ್ರೆ ಸುಮ್ಮನಿರಬೇಕಾ? ನಿಮ್ಮಲ್ಲಿ ಮತ್ತು ರೇವಣ್ಣರಲ್ಲಿ ನಮಗೆ ಆತ್ಮೀಯತೆ ಇದೆ. ಆದರೆ ಈ ಹಂತದಲ್ಲಿ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿ ಡಿಕೆಶಿ ವಿರುದ್ಧ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv