ಅತ್ಯಾಚಾರ ಆರೋಪ ಪ್ರಕರಣ – ರಮೇಶ್ ಜಾರಕಿಹೊಳಿಗಿಲ್ಲ ಮುಕ್ತಿ

Public TV
2 Min Read
ramesh jarkiholi

ನವದೆಹಲಿ : ಅತ್ಯಾಚಾರ ಆರೋಪ ಹೊತ್ತಿರುವ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿಗೆ ಕಾನೂನು ಸಂಕಷ್ಟಗಳು ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಪ್ರಕರಣ ತನಿಖೆಗೆ ರಚನೆಯಾದ ಎಸ್‍ಐಟಿ ‘ಬಿ – ರಿಪೋರ್ಟ್’ ಸಲ್ಲಿಸಿದ ಬಳಿಕವೂ ಸಂತ್ರಸ್ತೆಯಿಂದ ಕಾನೂನು ಹೋರಾಟ ಮುಂದುವರಿದಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಪ್ರಕರಣದ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದೆ. ನ್ಯಾ. ಇಂದಿರಾ ಬ್ಯಾನರ್ಜಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಎಸ್‍ಐಟಿ ರಚನೆಯ ವಿಧಾನದ ಬಗ್ಗೆ ಹೈಕೋರ್ಟ್ ನಿರ್ಧರಿಸಲಿ ಎಂದು ಹೇಳಿದೆ. ಇದನ್ನೂ ಓದಿ: ಯತ್ನಾಳ್ ಸತ್ತಿದ್ದಾರೆ, ಅದಕ್ಕಾಗಿ ಶವಯಾತ್ರೆ ಮಾಡ್ತಿದ್ದೇವೆ: ಮೊಹಮ್ಮದ್ ನಲಪಾಡ್

SUPREME COURT

ಇಂದು ವಿಚಾರಣೆ ವೇಳೆ ಸಂತ್ರಸ್ತೆ ಪರ ವಾದ ಮಂಡಿಸಿದ ವಕೀಲರು, ಎಸ್‍ಐಟಿ ರಚನೆ ಸರಿ ಇಲ್ಲ, ತನಿಖಾ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆದಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಎಸ್‍ಐಟಿ ಸರ್ಕಾರದ ತನ್ನ ಇಚ್ಛೆನುಸಾರ ರಚನೆ ಮಾಡಿಲ್ಲ, ರಾಜಕೀಯ ಒತ್ತಡ ಹೇರಿ ರಚನೆ ಮಾಡಿಸಲಾಗಿದೆ. ಈ ಎಸ್‍ಟಿಯು ಬಿ-ರಿಪೋರ್ಟ್ ಸಲ್ಲಿಸಿದ್ದು ಈ ವರದಿಯ ಮೇಲೆ ನಮ್ಮಗೆ ನಂಬಿಕೆ ಇಲ್ಲ ಎಂದರು.

ಹೀಗೆ ಸಿದ್ದವಾಗಿರುವ ವರದಿಯನ್ನು ಸೆಷನ್ಸ್ ನ್ಯಾಯಲಯಕ್ಕೆ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ, ಸುಪ್ರೀಂಕೋರ್ಟ್ ಈ ಆದೇಶಕ್ಕೆ ತಡೆ ನೀಡಬೇಕು, ಎಸ್‍ಐಟಿ ರಚನೆ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಿಜಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

high court 1 2

ವಾದ ಆಲಿಸಿದ ಪೀಠ, ಎಸ್‍ಐಟಿ ರಚನೆಯೂ ಸರಿ ಇದಿಯೇ, ಅದು ಪಾರದರ್ಶಕವಾಗಿದಿಯೇ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಹೈಕೋರ್ಟ್ ಗೆ ಸೂಚಿಸಿ ಪ್ರಕರಣವನ್ನು ಇತ್ಯರ್ಥ ಪಡಿಸಿದೆ. ಮಾರ್ಚ್ 9 ರಂದು ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ಕೂಡ ನಡೆಸಲಿದೆ. ಸುಪ್ರೀಂಕೋರ್ಟ್ ಈ ನಿರ್ದೇಶನದಿಂದ ಎಸ್‍ಐಟಿ ಬಿ – ರಿಪೋರ್ಟ್ ಸಲ್ಲಿಸಿದ್ದರು, ಹೈಕೋರ್ಟ್ ನಲ್ಲಿ ವಿಚಾರಣೆ ಅಂತ್ಯವಾಗುವವರೆಗೂ ವರದಿಯನ್ನು ಸೆಷನ್ಸ್ ನ್ಯಾಯಲಯಕ್ಕೆ ಸಲ್ಲಿಸಲ್ಲಿಸಲು ತಡೆಯಾಜ್ಞೆ ನೀಡದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *