ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ (Ramesh Jarakiholi) ಬೆಂಬಲಿಗರು ಮಾಡುತ್ತಿರುವ ಸಮಾವೇಶಕ್ಕೆ ನಾನು ಹೋಗುವುದಿಲ್ಲ ಎಂದು ಮಾಜಿ ಶಾಸಕ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ (Sanjay Patil) ಹೇಳಿದರು.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಬಿಜೆಪಿ ಕಾರ್ಯಕ್ರಮ ಅಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಮಾಡ್ತಿದ್ದಾರೆ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ನಾನು ಹೋಗೋದಿಲ್ಲ, ನನ್ನ ಮನಸ್ಸು ಒಪ್ಪೋದಿಲ್ಲ ಎಂದರು. ಇದನ್ನೂ ಓದಿ: ವಿದೇಶಗಳಿಗೆ ಹಣಕಾಸು ಸಚಿವಾಲಯದ ಮಾಹಿತಿ ರವಾನೆ – ಓರ್ವ ಉದ್ಯೋಗಿ ಅರೆಸ್ಟ್
Advertisement
Advertisement
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ (BJP Ticket) ಫೈಟ್ ವಿಚಾರಕ್ಕೆ, ಟಿಕೆಟ್ ಡಿಕ್ಲೇರ್ ಆದ ಮೇಲೆ ಎಲ್ಲರೂ ಒಂದಾಗುತ್ತಾರೆ. ಈಗ ಎಲ್ಲರೂ ಆಕಾಂಕ್ಷಿಗಳು ಅಂತಾ ಕಾರ್ಯಕ್ರಮ ಮಾಡುತ್ತಿದ್ದಾರೆ. ಯಾವುದೇ ವೇದಿಕೆ ಆದರೂ ಬಿಜೆಪಿ ಗೆಲ್ಲಿಸಿ ಅಂತಾ ಮನವಿ ಮಾಡ್ತೇವೆ. ರಮೇಶ್ ಜಾರಕಿಹೊಳಿ ಐದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳನ್ನ ಏನೂ ಕರೆದಿಲ್ಲ. ರಮೇಶ್ ಜಾರಕಿಹೊಳಿ ನಮ್ಮ ಬಿಜೆಪಿ ಲೀಡರ್ ಅವರ ಬಗ್ಗೆ ಹೆಮ್ಮೆ ಇದೆ. ಬಿಜೆಪಿ, ಕಮಲ, ಹಿಂದುತ್ವ, ನರೇಂದ್ರ ಮೋದಿ ನನ್ನ ಉಸಿರು. ಕಾರ್ಯಕರ್ತರಿಗೆ ಹೋಗಿ ಅಂತಾನೂ ಹೇಳಲ್ಲ, ಹೋಗಬೇಡಿ ಅಂತಾನೂ ಹೇಳಲ್ಲ. ನಮಗೆ ಯಾವುದೇ ಹಿರಿಯ ನಾಯಕರಿಂದ ಸೂಚನೆ ಬಂದಿಲ್ಲ ಎಂದರು.
Advertisement
ಬಿಜೆಪಿ ಬ್ಯಾನರ್ (BJP Banner) ಇಲ್ಲದ ವೇದಿಕೆ ಮೇಲೆ ಹೋಗಲು ಮನಸ್ಸಿಲ್ಲ. ಕ್ಯಾಂಡಿಡೇಟ್ ನಾನೇ ಅಂತಾ ಪೌಡರ್ ಲಿಪ್‍ಸ್ಟಿಕ್ ಹಚ್ಚಿಕೊಂಡು ನಿಂತಿದ್ದಾರೆ. ಆದರೆ ಪಕ್ಷ ನಿರ್ಧಾರ ಮಾಡುತ್ತೆ ಯಾರಿಗೆ ಟಿಕೆಟ್ ನೀಡಬೇಕು ಅಂತಾ. ಸಂಜಯ್ ಪಾಟೀಲ್ ಗೆ ಟಿಕೆಟ್ ಕೊಡಬೇಡಿ ಬೇಡ ಅಂತಾ ರಮೇಶ್ ಜಾರಕಿಹೊಳಿ ಎಲ್ಲೂ ಹೇಳಿಲ್ಲ. ಫೋನ್ ಮಾಡಿ ರಮೇಶ್ ಜಾರಕಿಹೊಳಿ ಸಮಾವೇಶಕ್ಕೆ ಕರೆದಿದ್ದರು. ಆದರೆ ಬಿಜೆಪಿ ಬ್ಯಾನರ್ ಹಚ್ಚಿದ್ರೆ ಬರ್ತೀನಿ ಅಂತಾ ಹೇಳಿದ್ದೇನೆ ಎಂದು ಸಂಜಯ್ ಪಾಟೀಲ್ ಹೇಳಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k