ಸಚಿವ ಸಂಪುಟ ಸೇರಲು ರಮೇಶ್ ಜಾರಕಿಹೊಳಿ ಕಸರತ್ತು – ದೆಹಲಿಯಲ್ಲಿ ಲಾಬಿ

Public TV
1 Min Read
ramesh jarkiholi

ಬೆಳಗಾವಿ: ಸಿಡಿ ಕೇಸ್ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸಂಪುಟ ಸೇರಲು ಕಸರತ್ತು ನಡೆಸಿದ್ದಾರೆ.

bjp meeting2

ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಬೆನ್ನಲೇ ದೆಹಲಿಗೆ ರಮೇಶ್ ಜಾರಕಿಹೊಳಿ ದೌಡಾಯಿಸಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ 9.55ರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಜನರೇ ಬಿಜೆಪಿ ಆಡಳಿತ ಮೆಚ್ಚಿದ್ದಾರೆ, ಅದ್ಕೆ ನಾವು ಜಾಸ್ತಿ ಮಾತಾಡಲ್ಲ: ಡಿ.ಕೆ ಸುರೇಶ್ ವ್ಯಂಗ್ಯ

ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆಪ್ತ ಮೂಲಗಳಿಂದ ತಿಳಿದು ಬಂದಿದ್ದು, ಜಾರಕಿಹೊಳಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

amith shah

ಏಪ್ರಿಲ್‍ನಲ್ಲಿ ಸರ್ಕಾರದಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಬೊಮ್ಮಾಯಿ ಕ್ಯಾಬಿನೆಟ್‍ನಲ್ಲಿ 5 ಮೂಲ ಬಿಜೆಪಿ, ಮೂವರು ವಲಸಿಗರು ಸೇರಿ ಒಟ್ಟು 8 ಮಂದಿ ಸಚಿವರಿಗೆ ಕೊಕ್ ಸಾಧ್ಯತೆ ಇದೆ. ಮೂಲ ಬಿಜೆಪಿಗರಲ್ಲಿ ಹಿರಿತನ, 4 ಸಿಎಂಗಳ ಕ್ಯಾಬಿನೆಟ್‍ನಲ್ಲಿ ಸಚಿವರಾದವರಿಗೆ ಕೊಕ್ ನೀಡಬಹುದು ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡುತ್ತಿದೆ. ಬಿಎಸ್‍ವೈ, ಡಿವಿಎಸ್, ಶೆಟ್ಟರ್ ಕ್ಯಾಬಿನೆಟ್‍ನಲ್ಲೂ ಸಚಿವರಾಗಿ, ಬೊಮ್ಮಾಯಿ ಕ್ಯಾಬಿನೆಟ್‍ನಲ್ಲೂ ಸಚಿವರಾಗಿರುವ ಮೂವರಿಗೆ ಬಹುತೇಕ್ ಕೊಕ್‍ಗೆ ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿ 2 ವರ್ಷ ಸಚಿವರಾಗಿದ್ದವರಲ್ಲಿ ಇಬ್ಬರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಬರೋಬ್ಬರಿ ಒಂದು ಡಜನ್ ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನಕ್ಕೆ ಪ್ಲಾನ್ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ದೆಹಲಿ ನಡಿಗೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಹತ್ಯೆಗೆ ಕಾರಣನಾಗಿದ್ದರೆ ನನ್ನನ್ನು ನೇಣಿಗೇರಿಸಿ: ಫಾರೂಕ್ ಅಬ್ದುಲ್ಲಾ

 

 

Share This Article
Leave a Comment

Leave a Reply

Your email address will not be published. Required fields are marked *