ಬೆಳಗಾವಿ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿಗೆ (Ramesh Jarkiholi) ಸರ್ಕಾರ ಉರುಳಿಸುವ ಶಕ್ತಿಯಿದೆ. ಅವರು ಇನ್ನೊಮ್ಮೆ ಸರ್ಕಾರ (Government) ಉರುಳಿಸುವ ಪ್ರಯತ್ನ ಮಾಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ ಎಂದು ಸಹೋದರ ಹಾಗೂ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅವರು ಕಾಲೆಳೆದಿದ್ದಾರೆ.
ಗೋಕಾಕ್ ನಗರದಲ್ಲಿ ನಡೆದ ಉಪ್ಪಾರ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಸಹೋದರಿಗೆ ಸರ್ಕಾರ ಉರುಳಿಸುವ ಶಕ್ತಿಯಿದೆ ಎಂದು ಹೇಳ್ತಾರೆ. ರಾಜ್ಯ ರಾಜಕಾರಣದಲ್ಲಿ ನಾಲ್ವರು ಸಹೋದರರಿದ್ದೇವೆ. ನಾಲ್ವರು ಒಂದೇ ಎಂದು ಭಾವಿಸಬಾರದು. ನಾಲ್ವರು ಸಹೋದರರ ಕೆಲಸವೂ ಬೇರೆ-ಬೇರೆ ಇದೆ. ಯಾರನ್ನೂ ಗೊಂದಲ ಮಾಡಿಕೊಳ್ಳಬಾರದು ಎಂದರು. ಇದನ್ನೂ ಓದಿ: ಕನ್ನಡದ ನಟ ಪ್ರತಾಪ್ ನಾರಾಯಣ ಇದೀಗ ಪ್ರಗ್ನೆಂಟ್: ಹೊಸ ದುನಿಯಾದ ವಿಚಿತ್ರ ಸುದ್ದಿ
ನಮ್ಮಲ್ಲಿ ಸರ್ಕಾರ ಉರುಳಿಸುವ ಶಕ್ತಿ ರಮೇಶ್ ಜಾರಕಿಹೊಳಿ (Ramesh Jarakiholi) ಮಾತ್ರ ಇದೆ. ಉಳಿದ ನಾಲ್ವರು ಸಹೋದರರು ಸರ್ಕಾರ ಉರುಳಿಸುವುದರ ಭಾಗವಾಗುವುದಿಲ್ಲ. ರಮೇಶ್ ಜಾರಕಿಹೊಳಿಗೆ ಮಾತ್ರ ಸರ್ಕಾರ ಉರಳಿಸುವ ಶಕ್ತಿ ಇದೆ. ಅವರು ಇನ್ನೊಮ್ಮೆ ಸರ್ಕಾರ ಉರಳಿಸುವ ಪ್ರಯತ್ನ ಮಾಡಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಕುಟುಕಿದ್ದಾರೆ.