ಧಾರವಾಡ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಪಕ್ಷ ಬಿಟ್ಟು ಹೋಗುವುದಿಲ್ಲ. ಆದಷ್ಟು ಬೇಗ ಅವರು ಮಂತ್ರಿ ಆಗುತ್ತಾರೆ. ಅವರಿಗೆ ಎಲ್ಲ ಭವಿಷ್ಯ ಬಿಜೆಪಿಯಲ್ಲಿಯೇ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagauda Patil Yatnal) ಹೇಳಿದ್ದಾರೆ.
ಜಾರಕಿಹೊಳಿ ಜೆಡಿಎಸ್ (JDS) ಸೇರುತ್ತಾರೆಂಬ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಬಿಟ್ಟರೆ ಜೆಡಿಎಸ್‍ನಿಂದ ಏನು ಆಗುವುದಿದೆ?. ಮಂತ್ರಿ ಮಂಡಲ ಈಗಲೂ ಪುನರ್ ರಚನೆ ಆಗಬಹುದು. ನಾನು ಆಕಾಂಕ್ಷಿ ಅಲ್ಲ. ಆದರೆ ಜಾರಕಿಹೊಳಿಯವರದ್ದೇ ಮೊದಲ ಹೆಸರು ಇದೆ ಎಂದರು.
Advertisement
Advertisement
ಪರೇಶ್ ಮೇಸ್ತಾ (Paresh Mestha) ಕೇಸ್ ಬಿ ರಿಪೋರ್ಟ್ ವಿಚಾರದ ಕುರಿತು ಮಾತನಾಡಿ, ಇನ್ನೊಮ್ಮೆ ತನಿಖೆ ಮಾಡಿಸುವ ಚಿಂತನೆ ನಡೆದಿದೆ. ಇನ್ನೊಮ್ಮೆ ಪುನರ್ ತನಿಖೆ ಆಗಬೇಕಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪರಿಶೀಲನೆ ಮಾಡುವಂತೆ ಸರ್ಕಾರ ಈಗಾಗಲೇ ಸಿಬಿಐಗೆ ಕೇಳಿಕೊಂಡಿದ್ದೇನೆ ಎಂದು ಹೆಳಿದರು. ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ
Advertisement
Advertisement
ಧಾರವಾಡ (Dharwad) ಕ್ಕೆ ಬಂದರೆ ನೋಡಿಕೊಳ್ಳುತ್ತೇವೆಂದು ಸವಾಲುಗಳು ಬರುತ್ತಿರೋ ವಿಚಾರದ ಬಗ್ಗೆ ಮಾತನಾಡಿ, ಎಲ್ಲ ಸವಾಲುಗಳಿಗೂ ಉತ್ತರ ಕೊಡುತ್ತಿದ್ದೇನೆ. ಧಾರವಾಡದಲ್ಲಿಯೂ ಒಬ್ಬ ಹೇಳಿದ್ದ. ಇನ್ನು ಕೆಲವರು ದಿನಗಳಲ್ಲಿ ಧಾರವಾಡಕ್ಕೂ ಬರುತ್ತೀನಿ. ಅಗರ್ ತುಮ್ಹಾರೆ ಪಾಸ್ ದಮ್ ಹೈತೋ ಆಯಾರೆ ಚಿ… ಅಂತಾ ಹೇಳಿ ಹೋಗುವೆ. ಆ ಸವಾಲು ತೆಗದುಕೊಂಡೇ ಇಂದು ಧಾರವಾಡಕ್ಕೆ ಬಂದಿದ್ದೇನೆ. ಮುಂದಿನ ಸಲ ಧಾರವಾಡ ನಗರಕ್ಕೆ ಬರುವೆ ಎಂದು ತಿರುಗೇಟು ನೀಡಿದರು.
ಮೊನ್ನೆ ಗೋಕಾಕ್‍ನಲ್ಲಿಯೂ ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಅಂದಿದ್ರು. ಈಗ ಧಾರವಾಡಕ್ಕೆ ಬರುತ್ತೀನಿ. ಇದೇನು ಪಾಕಿಸ್ತಾನ (Pakistan) ಅಲ್ಲ. ಇದು ಹಿಂದೂಸ್ತಾನ ಇದೆ. ಧಾರವಾಡದಲ್ಲಿ ಯಾವ ಚೌಕ್ ಹೇಳ್ತಿಯೋ ಅಲ್ಲಿ ಪೆಂಡಾಲ್ ಹಾಕಿ ಮಾತನಾಡುವೆ ಪ್ರತಿ ಸವಾಲೆಸೆದರು.