ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಬಹುನಿರೀಕ್ಷಿತ ‘ಕರಾವಳಿ’ (Karavali) ಸಿನಿಮಾದಲ್ಲಿ ರಮೇಶ್ ಇಂದಿರಾ (Ramesh Indira) ಖಳನಟನಾಗಿ ಅಬ್ಬರಿಸಿದ್ದಾರೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟನ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಇದನ್ನೂ ಓದಿ:ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ
ಸಪ್ತಸಾಗರದಾಚೆ ಎಲ್ಲೋ ಎ ಮತ್ತು ಬಿ ಪಾರ್ಟ್‌ನಲ್ಲಿ ಹೀರೋ ರಕ್ಷಿತ್ ಶೆಟ್ಟಿ (Rakshit Shetty) ಮುಂದೆ ರಮೇಶ್ ಇಂದಿರಾ ವಿಲನ್ ಆಗಿ ಗೆದ್ದು ಬೀಗಿದ್ದರು. ಇದೀಗ ಮತ್ತೆ ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಮುಂದೆ ಅಬ್ಬರಿಸಲಿದ್ದಾರೆ. ಕಾರಿನ ಮೇಲೆ ಕುಳಿತಿರುವ ರಮೇಶ್ ಇಂದಿರಾ ಬಂದೂಕು ಹಿಡಿದು ಖಡಕ್ ಆಗಿ ಪೋಸ್ ನೀಡಿರುವ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಸಿನಿಮಾದ ಪೋಸ್ಟರ್ ಲುಕ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
- Advertisement
View this post on Instagram
‘ಕರಾವಳಿ’ ಚಿತ್ರದಲ್ಲಿ ಕರಾವಳಿ ಭಾಗದ ಕಥೆಯನ್ನು ಒಳಗೊಂಡಿದೆ. ಪ್ರಜ್ವಲ್ ದೇವರಾಜ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ.