ನ್ಯಾಷನಲ್ ಸ್ಟಾರ್ ಯಶ್ ಪ್ರಸ್ತುತ ‘ಟಾಕ್ಸಿಕ್’ (Toxic) ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಒಪ್ಪಿಕೊಂಡಿರುವ ‘ರಾಮಾಯಣ’ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಡಿಸೆಂಬರ್‌ನಲ್ಲಿ ಯಶ್ (Yash) ‘ರಾಮಾಯಣ’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಆ.8ಕ್ಕೆ ಟಾಕ್ಸಿಕ್ ಸಿನಿಮಾಗೆ ಚಿತ್ರಕ್ಕೆ ನೀಡಲಾಗಿತ್ತು. ಅಂದಿನಿಂದ ಈ ಪ್ರಾಜೆಕ್ಟ್‌ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇನ್ನೂ ಹಲವು ಹಂತದಲ್ಲಿ ಶೂಟಿಂಗ್ ನಡೆಯಲಿದೆ. ಆದರೆ ರಣ್‌ಬೀರ್ ಕಪೂರ್ (Ranbir Kapoor) ‘ರಾಮಾಯಣ’ (Ramayana) ಚಿತ್ರದಲ್ಲಿ ಯಶ್ ‘ರಾವಣ’ನಾಗಿ ಬರೋಕೆ ಮುಹೂರ್ತ ಫಿಕ್ಸ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ಜೊತೆಗೆಯೇ ಈ ಚಿತ್ರಕ್ಕೂ ಅವರು ಸಾಥ್ ನೀಡಲಿದ್ದಾರೆ.
ರಣ್‌ಬೀರ್ ರಾಮನ ಪಾತ್ರ, ಸಾಯಿ ಪಲ್ಲವಿ (Sai Pallavi) ಸೀತೆ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಇವರ ಭಾಗದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಚಿತ್ರದ ಸೆಟ್‌ಗೆ ಯಶ್ ಎಂಟ್ರಿ ಕೊಡಲಿದ್ದಾರೆ. ರಾವಣನಾಗಿ ಘರ್ಜಿಸೋಕೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಇನ್ನೂ ‘ರಾಮಾಯಣ’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕನಾಗಿಯೂ ಕನ್ನಡದ ನಟ ಯಶ್ ಕೈಜೋಡಿಸಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.