ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿರುವ `ರಾಮಾಯಣ ಪಾರ್ಟ್-1′ (Ramayana Part-1) ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿ ಭಾರೀ ಸೌಂಡ್ ಮಾಡಿತ್ತು. ಇದೀಗ ಮುಂದುವರೆದು ಲಕ್ಷ್ಮಣ ಪಾತ್ರಧಾರಿ ಬಾಲಿವುಡ್ ನಟ ರವಿ ದುಬೆ (Ravi Dubey) ಸೆಟ್‌ನಿಂದ ಹೊಸ ಫೋಟೋ ಹಂಚಿಕೊಂಡಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಜೊತೆ ಶ್ರೀರಾಮನ ಪಾತ್ರಧಾರಿ ನಟ ರಣಬೀರ್ ಕಪೂರ್ ಜೊತೆ ರವಿ ದುಬೆ ನಿಂತು ಪೋಸ್ ಕೊಟ್ಟಿದ್ದಾರೆ. ರಾಮಾಯಣ ಸೆಟ್‌ನಿಂದ ಚಿತ್ರತಂಡ (Ramayana Film Team) ರಿಲೀಸ್ ಮಾಡಿರುವ ಮೊದಲ ಫೋಟೋ ಇದಾಗಿದೆ.
ಇನ್ನು ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ತೆರೆಹಂಚಿಕೊಂಡಿದ್ದಾರೆ. ಫಸ್ಟ್ ಪಾರ್ಟ್‌ನಲ್ಲಿ ಬರುವ ಲಕ್ಷ್ಮಣನ ಸಿಕ್ವೇನ್ಸ್ ಮುಗಿದಿದೆ ಎನ್ನಲಾಗ್ತಿದೆ. ಹೀಗಾಗಿ ಸೆಟ್‌ನಲ್ಲಿ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಟ ರಣಬೀರ್ ಕಪೂರ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ರವಿ ದುಬೆ. ಇದನ್ನೂ ಓದಿ: ಬೀಚ್‌ನಲ್ಲಿ ಡೀಪ್ ಕಿಸ್ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

ಮುಂದಿನ ವರ್ಷದ ದೀಪಾವಳಿಗೆ ರಿಲೀಸ್ ಆಗಲು ಸಜ್ಜಾಗಿರುವ ರಾಮಾಯಣ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿ 835 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ: ಪಾರ್ವತಮ್ಮ ರಾಜ್‌ಕುಮಾರ್ ಕನಸಿನ ಕೂಸಿಗೆ 50 ವರ್ಷ

ಇದೀಗ ಲಕ್ಷ್ಮಣನ ಪಾತ್ರಧಾರಿ ರವಿ ದುಬೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಫೋಟೋ ಕೊನೆಯ ದಿನದ ಚಿತ್ರೀಕರಣದ ಫೋಟೋವಾಗಿದ್ದು ಕ್ಯಾಶುವಲ್ ವೇರ್‌ನಲ್ಲಿ ಬ್ಲ್ಯೂಮ್ಯಾಟ್ ಮುಂದೆ ಪೋಸ್ ಕೊಟ್ಟಿದ್ದಾರೆ. ಇಡೀ ದೇಶ ಕಾದು ಕುಳಿತಿರುವ ಬಹುನಿರೀಕ್ಷಿತ ಚಿತ್ರ ʻರಾಮಾಯಣʼ ಆಗಿದ್ದು ಇದುವರೆಗೂ ಚಿತ್ರತಂಡದ ಸದಸ್ಯರು ಯಾವೊಂದು ಫೋಟೋ ಕೂಡ ಲೀಕ್ ಆಗದಂತೆ ಗೌಪ್ಯತೆ ಕಾಪಾಡಿಸಿಕೊಂಡಿದ್ದಾರೆ.
 


 
		 
		 
		 
		 
		
 
		 
		 
		 
		