ರಣಬೀರ್ ಕಪೂರ್, ಯಶ್ (Yash) ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ, ನಿತೇಶ್ ತಿವಾರಿ ಅವರ ನಿರ್ದೇಶನದ ರಾಮಾಯಣ 2 (Ramayana 2) ಚಿತ್ರವು ಪ್ರೀ-ಪ್ರೊಡಕ್ಷನ್ ನಿರ್ಮಾಣ ಹಂತದಲ್ಲಿದೆ. ರಾಮಾಯಣ-2 ಸಿನಿಮಾದ ವಿಎಫ್‌ಎಕ್ಸ್ ಕುರಿತು ಹೊಸ ಸುದ್ದಿಯೊಂದು ಸಖತ್ ಸುದ್ದಿ ಮಾಡ್ತಿದೆ. ರಾಮಾಯಣ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆದ ಬಳಿಕ ಸಿನಿಮಾ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಬಿಲ್ಡ್ ಆಗಿದೆ. ಇದೀಗ ಈ ಸಿನಿಮಾದ ಪಾರ್ಟ್-2 ಬಗ್ಗೆ ಬಿಗ್ ಅಪ್ ಡೇಟ್ ಸಿಕ್ಕಿದೆ.
ರಾಮಾಯಣ-2 ಸಿನಿಮಾದ ವಿಎಫ್‌ಎಕ್ಸ್ (VFX) ಸುಪ್ರವೈಸ್ ಮಾಡಲಿದೆ ಹಾಲಿವುಡ್ ಟೀಂ. ಗಾಡ್ಜಿಲ್ಲಾ ಎಕ್ಸ್ ಕಾಂಗ್ ಹಾಗೂ ವೆನಮ್ ಸಿನಿಮಾದಲ್ಲಿ ವಿಡಿಯೋ ಗ್ರಾಫಿಕ್ಸ್ ನಲ್ಲಿ ಕೆಲಸ ಮಾಡಿದ ತಂಡ ರಾಮಾಯಣ-2 ಚಿತ್ರದ VFX ತಂಡದ ಮೇಲ್ವಿಚಾರಣೆಯನ್ನ ವಹಿಸಿಕೊಂಡಿದೆ. ಈ ಬೆಳವಣಿಗೆ ರಾಮಾಯಣ ತಂಡಕ್ಕೆ ಮತ್ತಷ್ಟು ಬಲ ನೀಡಿದೆ. ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಆಗಾಗ ಚಿತ್ರದ ಬಜೆಟ್ ಹಾಗೂ ತಂಡದ ಬಗ್ಗೆ ಹೊಸ ಹೊಸ ಅಪ್ಡೇಟ್ ಕೊಡುತ್ತಿರುವುದು ಫ್ಯಾನ್ಸ್ ಕೌತುಕತೆ ಇಮ್ಮಡಿಗೊಳ್ಳೋಕೆ ಕಾರಣವಾಗ್ತಿದೆ. ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.
ರಾಮಾಯಣ ಪಾರ್ಟ್-2 ಸಿನಿಮಾದ ವಿಎಫ್ ಎಕ್ಸ್ ಮೇಲ್ವಿಚಾರಣೆಯನ್ನ ಹಾಲಿವುಡ್ ತಂತ್ರಜ್ಞ ಕ್ಸೇವಿಯರ್ ಬರ್ನಾಸ್ಕೋನಿ ನಿರ್ವಹಿಸಲಿದ್ದಾರೆ. ಫಸ್ಟ್ ಲುಕ್ ನಿಂದಲೇ ಅಟ್ರ್ಯಾಕ್ಟ್ ಮಾಡಿರುವ ರಾಮಾಯಣ ಸಿನಿಮಾದ ಪಾರ್ಟ್-1 2026ರ ದೀಪಾವಳಿಗೆ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇನ್ನು ಪಾರ್ಟ್-2 ಸಿನಿಮಾ 2027ರ ದೀಪಾವಳಿ ಹಬ್ಬದ ವಿಶೇಷವಾಗಿ ರಿಲೀಸ್ ಆಗಲಿದೆ. ಈಗ ಸಿಕ್ಕಿರುವ ಹೊಸ ಅಪ್ಡೇಟ್ ಕೇಳಿ ರಾಕಿಭಾಯ್ ಫ್ಯಾನ್ಸ್ ಸಂಭ್ರಮ ಪಡುತ್ತಿದ್ದಾರೆ.
 
					

 
		 
		 
		 
		 
		 
		 
		 
		 
		