ಚಿ.ಗುರುದತ್ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ರಮ್ಯಾ ರಾಮಸ್ವಾಮಿ’ ಸಿನಿಮಾದ ಕೆಲವು ಅಪ್ಡೇಟ್ ಹೊರ ಬಿದ್ದಿದೆ. ಈಗಾಗಲೇ ರಾಮಸ್ವಾಮಿಯ ಆಯ್ಕೆಯಾಗಿದ್ದು, ರಮ್ಯಾ ಪಾತ್ರಧಾರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಕನ್ನಡ ಸಿನಿಮಾ ರಂಗದ ಎವರ್ಗ್ರೀನ್ ರಾಮಾಚಾರಿ ಆಗಿರುವ ರವಿಚಂದ್ರನ್ ಅವರು ರಾಮಸ್ವಾಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಕನ್ನಡದ ಹೆಸರಾಂತ ನಟಿಯೇ ರಮ್ಯಾ ಪಾತ್ರವನ್ನು ಮಾಡಲಿದ್ದಾರಂತೆ. ಆ ಸ್ಟಾರ್ ನಟಿ ಯಾರು ಅನ್ನುವ ಹುಡುಕಾಟ ಸದ್ಯಕ್ಕೆ ನಡೆದಿದೆ. ಇದನ್ನೂ ಓದಿ : ಜಗತ್ತಿನ ಅತ್ಯಂತ ದುಬಾರಿ ನಟನಿಗೆ ಗಾಳ ಹಾಕಿದ ರಾಜಮೌಳಿ
ನಿರ್ದೇಶಕ ಚಿ.ಗುರುದತ್ ಮತ್ತು ರವಿಚಂದ್ರನ್ ನಲವತ್ತು ವರ್ಷಗಳ ಸ್ನೇಹಿತರು. ಈ ಸ್ನೇಹವೇ ಇಂದು ಸಿನಿಮಾ ಮಾಡಲು ಪ್ರೇರೇಪಿಸಿದೆ. ಜನಾರ್ದನ್ ಮಹರ್ಷಿ ಅವರು ಈ ಸಿನಿಮಾಗಾಗಿ ಕಥೆ ಬರೆದಿದ್ದು, ಭಾವನಾತ್ಮಕ ಅಂಶಗಳ ಜತೆಗೆ ನಗಿಸುತ್ತಲೇ ಈ ಸಿನಿಮಾ ಸಾಗಲಿದೆ ಎಂದಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
ರಾಮಸ್ವಾಮಿ ಪಾತ್ರದಷ್ಟೇ ರಮ್ಯಾ ಪಾತ್ರಕ್ಕೂ ಮಹತ್ವವಿದೆಯಂತೆ. ಈ ಎರಡೇ ಪಾತ್ರಗಳ ಸುತ್ತ ಇಡೀ ಸಿನಿಮಾ ಹೆಣೆಯಲಾಗಿದೆಯಂತೆ. ಹಾಗಾಗಿ ಸ್ಟಾರ್ ನಟಿಯೇ ಈ ಪಾತ್ರಕ್ಕೆ ಸೂಕ್ತ ಎನ್ನುವುದು ನಿರ್ದೇಶಕರು ಮಾತು. ಈಗಾಗಲೇ ಇಬ್ಬರು ನಾಯಕಿಯರ ಜತೆ ಮಾತುಕತೆ ಕೂಡ ನಡೆದಿದೆ ಎನ್ನಲಾಗುತ್ತಿದೆ. ನಾಯಕಿಯ ಆಯ್ಕೆ ಮಾಡಿಕೊಂಡೇ ಚಿತ್ರೀಕರಣಕ್ಕೆ ಹೋಗಲಿದೆ ಚಿತ್ರತಂಡ. ಮೈತ್ರಿ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಬಂಡವಾಳ ಹೂಡಿರುವ ಎನ್.ಎಸ್.ರಾಜಕುಮಾರ್ ಈ ಸಿನಿಮಾದ ನಿರ್ಮಾಪಕರು. ಏಪ್ರಿಲ್ ನಿಂದ ಶೂಟಿಂಗ್ ಶುರುವಾಗಲಿದೆ.