ರಾಮನಗರ: ಅರ್ಧ ಸಿಹಿ ಅರ್ಧ ಹುಳಿ ರುಚಿ ಇರುವ ಕೆಂಪುಬಣ್ಣದ ಹುಣಸೇಹಣ್ಣು ಕಂಡ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಎನ್.ಆರ್ ಕಾಲೋನಿ ಗ್ರಾಮದ ಜನ ಅಶ್ಚರ್ಯಗೊಂಡಿದ್ದಾರೆ.
ಕಳೆದ ಐದು ವರ್ಷದಿಂದ ಗ್ರಾಮದ ಕಂಬದ ಮಾರಮ್ಮನ ವಾಸಸ್ಥಳದಲ್ಲಿರುವ ಈ ಹುಣಸೇಹಣ್ಣಿನ ಮರದಲ್ಲಿ ಈ ರೀತಿ ಹುಣಸೇಹಣ್ಣು ಬೆಳೆಯುತ್ತಿದೆ. ಈ ಮರದ ತುಂಬ ರಕ್ತದ ರೀತಿ ಕೆಂಪು ಬಣ್ಣ ಕಲೆ ಇದೆ. ಈ ಮರದಲ್ಲಿ ಬಿಡುವ ಹುಣಸೇಹಣ್ಣನ್ನು ಕಿತ್ತು ಅದನ್ನು ಹಿಡಿದು ಉಜ್ಜಿದರೆ ಕೈಯೆಲ್ಲ ಕೆಂಪು ಬಣ್ಣಕ್ಕೆ ತಿರುಗುತ್ತದೆ.
Advertisement
Advertisement
ಈ ಮರದ ಹುಣಸೇಹಣ್ಣಿನ ಇನ್ನೊಂದು ವಿಶೇಷವೆಂದರೆ ಇದನ್ನು ತಿಂದರೆ ಅರ್ಧ ಸಿಹಿ ಹಾಗೂ ಅರ್ಧ ಹುಳಿ ರುಚಿಯನ್ನು ಕೊಡುತ್ತದೆ. ಇದರ ಜೊತೆಗೆ ಈ ಹುಣಸೇಹಣ್ಣನ್ನು ಬಳಸಿ ಸಂಬಾರ್ ಮಾಡಿದರೆ ಸಾಂಬಾರ್ ಎಲ್ಲವೂ ಕೆಂಪು ಬಣ್ಣ ಆಗುತ್ತಿದೆ. ಈ ವಿಚಿತ್ರ ಹುಣಸೇಹಣ್ಣನ್ನು ನೋಡಿದ ಜನರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.