ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಭೂಕಬಳಿಕೆ ಜಾಗವನ್ನ ವಾಪಸ್ ಮಾಡಲಿ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೇಮಠ್ ಆಗ್ರಹಿಸಿದ್ದಾರೆ.
ರಾಮನಗರ ತಾಲೂಕಿನ ಬಿಡದಿಯ ಕೇತಗಾನಹಳ್ಳಿಗೆ ಹೋಗಿದ್ದಾಗ ಮೊಟ್ಟೆ ಎಸೆದು ಹಲ್ಲೆ ನಡೆಸಲಾಗಿತ್ತು. ಈ ವಿಚಾರವಾಗಿ ಇಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್‍ಡಿ ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರಿಗೆ ಸಂವಿಧಾನದ ಮೇಲೆ ಗೌರವಿದ್ದರೆ ಕರ್ನಾಟಕದ ಜನರ ಕ್ಷಮೆ ಕೇಳಬೇಕು. ಜೊತೆಗೆ ತಾವು ಯಾರ ಬಳಿ ಜಮೀನು ತೆಗೆದುಕೊಂಡಿದ್ದಾರೋ ಅವರಿಗೆ ಮರಳಿಸಲಿ. ಇಲ್ಲದಿದ್ದರೆ ಪ್ರಭಾವಿಗಳಿಗೆ ಬಂದ ಸ್ಥಿತಿ ಇವರಿಗೂ ಬರಬಹುದು. ನಾವು ಇಷ್ಟಕ್ಕೆ ಇದನ್ನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು
Advertisement
Advertisement
ಬಿಡದಿಯ ಕೇತಗಾನಹಳ್ಳಿ ಸಮೀಪದ ಮಾಜಿ ಸಿಎಂ ಕುಮಾರಸ್ವಾಮಿ ಅವರು 22 ಎಕರೆ ಗೋಮಾಳ ಜಮೀನು ಖರೀದಿಸಿದ್ದಾರೆ. ಅವರ ಚಿಕ್ಕಮ್ಮ ಸಾವಿತ್ರಮ್ಮ 22 ಎಕರೆ ಖರೀದಿಸಿ ದಾನ ನೀಡಿದ್ದು, 56 ಎಕರೆ ಎಚ್‍ಡಿ ಕುಮಾರಸ್ವಾಮಿ ಹೆಸರಿನಲ್ಲಿದೆ. ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ತಮ್ಮ ನಂಜುಡ್ಯಯ್ಯ, ತಮ್ಮಣ್ಣನ ಪತ್ನಿ ಹಾಗೂ ಮಕ್ಕಳು 210 ಎಕರೆ ಜಮೀನನ್ನು ಭೂಕಬಳಿಕೆ ಮಾಡಿದ್ದಾರೆ. ವಸ್ತುಸ್ಥಿತಿ ತಿಳಿಯಲು ಗ್ರಾಮಕ್ಕೆ ಹೋಗಿದ್ದೇವು. ಈ ವೇಳೆ ಮೊಟ್ಟೆಯಲ್ಲಿ ಹೊಡೆದು ಅವಾಚ್ಯ ಶಬ್ದಗಳಿಂದ ಎಚ್‍ಡಿಕೆ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಭೂಕಬಳಿಕೆ ವಿಚಾರವಾಗಿ ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ಕಾನೂನಾತ್ಮಕ ಹೋರಾಟ ನಡೆಸುವುದಾಗಿ ತಿಳಿಸಿದರು.
Advertisement
ನಾಚಿಕೆ, ಮಾನ, ಮಾರ್ಯದೆ ಬಿಟ್ಟು ಭೂಕಬಳಿಕೆ ಮಾಡಿದ್ದು ಕರ್ನಾಟಕ ಜನತೆಯ ಕ್ಷಮೆ ಕೇಳಿ ಭೂಮಿ ವಾಪಾಸ್ ನೀಡಲಿ. ಅಲ್ಲದೇ ಈ ವಯಸ್ಸಿನಲ್ಲಾದರೂ ಎಚ್.ಡಿ.ದೇವೇಗೌಡ ಅವರು ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದರು.
Advertisement
ಪಬ್ಲಿಕ್ ಟಿವಿ ಸಂದರ್ಶನದ ವೇಳೆ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ ಎಂದಿದ್ದೆ. ಅವರಿಗೆ ಒಂದು ಗತಿ ಬಂತು. ಕಾನೂನಿನ ಗಾಲಿಗಳು ಚಲಿಸಿದರೆ ನೂರು ವರ್ಷ ಅವರು ಜೈಲಿನಲ್ಲಿರಬೇಕಾಗುತ್ತದೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಸಿಎಂ ಆಗಿದ್ದವರು. ತಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಬೇಕು. ತಮ್ಮ ಹೆಸರಿಗೆ ಕಳಂಕ ತರುವ ಕಾರ್ಯಕರ್ತರನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ನಾಚಿಕೆ, ಮರ್ಯಾದೆ ಬಿಟ್ಟು ಭೂಕಬಳಿಕೆ ಮಾಡಿದ್ದಾರೆ. ಮಾನ ಮರ್ಯಾದೆಯಿದ್ದರೆ ಭೂಕಬಳಿಕೆ ಜಾಗವನ್ನು ವಾಪಸ್ ಮಾಡಲಿ ಎಂದರು.
ಇದೇ ವೇಳೆ ಮಾತನಾಡಿದ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣರೆಡ್ಡಿ ಅವರು, ನಮ್ಮ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ ಘಟನೆ ಎಚ್.ಡಿ.ಕುಮಾರಸ್ವಾಮಿ ಪ್ರೇರಿತವಲ್ಲ. ಆದರೆ ಹಲ್ಲೆ ನಡೆಸಿದವರು ಜೆಡಿಎಸ್ ಕಾರ್ಯಕರ್ತರ ಎಂಬುದು ಸ್ಪಷ್ಟ. ಇಂತಹ ಹುಚ್ಚುನಾಯಿಗಳನ್ನು ಎಚ್‍ಡಿಕೆ ಸಾಕಿಕೊಂಡಿದ್ದಾರೆ ಎಂದು ಹರಿಹಾಯ್ದರು.