ರಾಮನಗರ: ರಾಮನಗರ ಜಿಲ್ಲಾ ಕಾರಾಗೃಹದಲ್ಲಿ (Ramanagara District Jail) ಕೈದಿಗಳ (Prisoners) ನಡುವೆ ಮಾರಾಮಾರಿ ನಡೆದಿದ್ದು, ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡಿವೆ. ಈ ಹಿನ್ನೆಲೆ ಜಿಲ್ಲಾ ಕಾರಾಗೃಹದ 23 ಕೈದಿಗಳ ಎಫ್‌ಐಆರ್ (FIR) ದಾಖಲಾಗಿದೆ.
ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಹರ್ಷ ಹಾಗೂ ಮತ್ತೋರ್ವ ರೌಡಿಶೀಟರ್ ದೇವರಾಜು ನಡುವೆ ಹಳೇ ವೈಷಮ್ಯಕ್ಕೆ ಗಲಾಟೆ ಆರಂಭವಾಗಿದೆ. ಜೈಲಿನಲ್ಲಿದ್ದ ಹಲವು ಕೈದಿಗಳು ಎರಡು ಗುಂಪುಗಳಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಧ್ಯಪ್ರವೇಶ ಮಾಡಿ ಗಲಾಟೆ ನಿಯಂತ್ರಿಸಿ ಕೈದಿಗಳ ಸಮಾಧಾನ ಮಾಡಿದ್ದಾರೆ. ಗಲಾಟೆ ತಡೆಯುವ ವೇಳೆ ಜೈಲು ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಗುಂಪು ಚದುರಿಸಿ ಎರಡೂ ಗುಂಪಿನ ಕೈದಿಗಳನ್ನು ಪ್ರತ್ಯೇಕ ಬ್ಯಾರಾಕ್‌ಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು – ರಾಜ್ಯಪಾಲ, ಸಿಎಂರಿಂದ ಆತ್ಮೀಯ ಸ್ವಾಗತ
ಈ ಬಗ್ಗೆ ರಾಮನಗರ ಟೌನ್ ಠಾಣೆಯಲ್ಲಿ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ದೂರು ದಾಖಲು ಮಾಡಿದ್ದು, ಕಾರಾಗೃಹ ನಿಯಮ ಉಲ್ಲಂಘನೆ ಹಾಗೂ ಗುಂಪುಕಟ್ಟಿಕೊಂಡು ಗಲಾಟೆ ಮಾಡಿದ ಆರೋಪದಡಿ 23 ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಜಮ್ಮು ಕಾಶ್ಮೀರದಲ್ಲಿದ್ದಾಗಲೇ ಒಳನುಸುಳಲು ಯತ್ನ – ಶಂಕಿತ ಉಗ್ರರ ಮೇಲೆ ಗುಂಡಿನ ದಾಳಿ