ರಾಮನಗರ: ಹೊಸ ವರ್ಷವನ್ನ ಅದ್ಧೂರಿಯಾಗಿ ಆಚರಣೆ ಮಾಡಬೇಕು, ಕುಡಿದು ಡಿಜೆ ಸಾಂಗ್ಸ್ ಗೆ ಕುಣಿಯಬೇಕು. ಮಧ್ಯರಾತ್ರಿಯಲ್ಲೇ ಲಾಂಗ್ ಡ್ರೈವ್ ಹೋಗಲು ಫಿಕ್ಸ್ ಮಾಡಿಕೊಂಡಿದ್ದರೆ ರಾಮನಗರದ ಕಡೆಗೆ ಸುಳಿಯುವ ದುಸ್ಸಾಹಸಕ್ಕೆ ಕೈ ಹಾಕಿದ್ರೆ ಜೋಕೆ. ಮಧ್ಯರಾತ್ರಿ ಎಷ್ಟೇ ಸಮಯವಾದ್ರೂ ಎಣ್ಣೆ ಕಿಕ್ ಅನ್ನು ಪೊಲೀಸರು ಇಳಿಸುವುದು ಗ್ಯಾರಂಟಿ.
ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜೋರು ಪಾರ್ಟಿ ಮಾಡುವ ಯೋಚನೆ ಮಾಡಿಕೊಂಡಿದರೆ, ನಿಮ್ಮ ಕನಸನ್ನು ಅರ್ಧಕ್ಕೆ ಈಗಲೇ ಕೈಬಿಟ್ಟರೇ ಒಳ್ಳೆಯದು. ಎಣ್ಣೆ ಕಿಕ್ ನಲ್ಲಿ ಬೆಂಗಳೂರು- ಮೈಸೂರು ರಸ್ತೆಗಿಳಿದ್ರೆ ನಿಮಗಾಗಿ ಪೊಲೀಸರು ಕಾಯುತ್ತಿರುತ್ತಾರೆ. ನಂತರ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಜೊತೆಗೆ ದುಬಾರಿ ಫೈನ್ ಕಟ್ಟಲೇಬೇಕಾಗುತ್ತೆ.
Advertisement
ಹಿಡಿಯೋದಂತು ಗ್ಯಾರೆಂಟಿ!#drunkendriving #NYE2020 pic.twitter.com/54KY0IOCo4
— Ramanagara District Police (@spramanagara) December 28, 2019
Advertisement
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕುಡಿದು ವಾಹನ ಚಾಲಾಯಿಸುವವರ ಮೇಲೆ ರಾಮನಗರ ಜಿಲ್ಲಾ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಇದಕ್ಕಾಗಿ ಪೊಲೀಸರು ಟ್ವಿಟರ್ ನಲ್ಲಿ ‘ಹಿಡಿಯೋದು ಗ್ಯಾರೆಂಟಿ’ ಎಂದು ಪಕ್ಷಿ ಕೂಡ ಕೂಗಿಸಿದ್ದಾರೆ. ಆ ಮೂಲಕ ಹೊಸ ವರ್ಷದ ಮೊದಲ ದಿನವಾಗಲೀ ಅಥವಾ ಸಾಮಾನ್ಯ ದಿನವಾಗಿರಲಿ ನಮ್ಮ ಕರ್ತವ್ಯವನ್ನು ನಾವು ಮಾಡಿಯೇ ತೀರುತ್ತೇವೆ ಎಂಬುದಾಗಿ ಜಿಲ್ಲೆಯ ಜನತೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
Advertisement
ಇದೀಗ ಪೊಲೀಸರ ಎಚ್ಚರಿಕೆ ಸಂದೇಶ ಸೆಲಬ್ರೇಷನ್ ಮೂಡ್ ನಲ್ಲಿದ್ದವರಿಗೆ ಆಘಾತವನ್ನುಂಟು ಮಾಡುತ್ತಿದೆ. ರಾಮನಗರ ಜಿಲ್ಲಾ ಪೊಲೀಸ್ ಟ್ವಿಟ್ಟರಿನಲ್ಲಿ ಕಳೆದ ಎರಡು ದಿನಗಳ ಹಿಂದೆಯೇ “ಹೊಸ ವರ್ಷದ ಸಂಭ್ರಮದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ” ಎಂಬ ಸಂದೇಶದ ಜೊತೆಗೆ ಹಿಡಿಯೋದಂತೂ ಗ್ಯಾರಂಟಿ ಎಂಬ ಒನ್‍ಲೈನ್ ಟ್ಯಾಗ್ ಮಾಡಿರುವ ಪೊಲೀಸರು, ಒಂದು ವಾಕ್ಯದಲ್ಲೇ ಎಚ್ಚರಿಕೆ ಹಾಗೂ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.