Connect with us

Districts

ದರೋಡೆಗೆ ಪೊದೆ ಒಳಗೆ ಕೂತು ಹೊಂಚು ಹಾಕುತ್ತಿದ್ದ ಆರು ಮಂದಿ ಅರೆಸ್ಟ್

Published

on

ರಾಮನಗರ: ಹೆದ್ದಾರಿಯಲ್ಲಿ ವಾಹನ ಸವಾರರ ಮೇಲೆ ದಾಳಿ ನಡಸಿ ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಆರು ಜನ ದರೋಡೆಕೋರರನ್ನು ಬಿಡದಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಡದಿಯ ಶಾಂತರಾಜು ಅಲಿಯಾಸ್ ಶಾಂತ (24) ಮತ್ತು ಶ್ರೀನಿವಾಸ್ ಅಲಿಯಾಸ್ ಯಾಡುಸೀನಾ (27), ಬೆಂಗಳೂರಿನ ಮಹೇಶ್ ಅಲಿಯಾಸ ಕೋಯಾ (34), ಭರತ್ ಅಲಿಯಾಸ್ ಪುಳಿಚಾರ್ (26), ಶ್ರೀಧರ್ ಎಚ್.ಕೆ ಅಲಿಯಾಸ್ ಕೆಂದ (26) ಬಂಧಿತ ದರೋಡೆಕೋರರು.

ಬಿಡದಿ ಸಮೀಪದ ಗಾಣಕಲ್ ರಸ್ತೆಯ ಅವರಗೆರೆ ಕ್ರಾಸ್ ಬಳಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚುಹಾಕಿ ಪೊದೆಯಲ್ಲಿ ಕುಳಿತ್ತಿದ್ದರು. ಈ ಬಗ್ಗೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾಸ್ಪದವಾಗಿ ಓಡಾಡುತ್ತಿದ್ದವರನ್ನು ವಶಕ್ಕೆ ಪಡೆದು ನಂತರ ಪೊದೆಯಲ್ಲಿ ಅವಿತಿದ್ದವರನ್ನು ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಬಂಧಿತ ದರೋಡೆಕೋರರಿಂದ ದರೋಡೆಗೆ ಉಪಯೋಗಿಸಲು ತಮ್ಮ ಬಳಿ ಇಟ್ಟುಕೊಂಡಿದ್ದ ಕಾರದ ಪುಡಿ ಸೇರಿದಂತೆ ಮಾರಕಾಸ್ತ್ರಗಳು ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಶಾಂತರಾಜು ಹಾಗೂ ಶ್ರೀನಿವಾಸ ಎಂಬುವವರು ಬಿಡದಿ ಠಾಣೆಯ ರೌಡಿ ಶೀಟರ್ ಗಳಾಗಿದ್ದರೆ. ಇನ್ನುಳಿದ ನಾಲ್ವರು ದರೋಡೆಕೋರರು ಹೊಸಮುಖಗಳಾಗಿದ್ದು ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *