ರಾಮನಗರ: ಇದು ಸಿಟಿಯಲ್ಲ ರಾಮನಗರ ಜಿಲ್ಲೆ ನೆನಪಿರಲಿ ಎಸ್ಪಿಗೆ ಶಿಸ್ತು ಕಲಿಯಲು ಹೇಳು ಎಂದು ಸಂಸದ ಡಿಕೆ ಸುರೇಶ್ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.
ಎಲ್ಲಿ ನಿಮ್ ಎಸ್ಪಿ, ಇದು ಬೇರೆ ತರಹ ಅಲ್ಲ ನಿಮ್ ಎಸ್ಪಿಗೆ ಹೇಳಿ. ಯಶವಂತಪುರಕ್ಕೆ ಏನ್ ಡ್ಯೂಟಿಗೆ ಹೋಗಿದ್ದಾರಾ ಬಂದೋಬಸ್ತ್‍ಗೆ ಹೋಗಿದ್ದಾರಾ? ಎಲೆಕ್ಷನ್ ಅದರ ಪಾಡಿಗೆ ನಡೆಯುತ್ತೆ ಮೀಟಿಂಗ್ ಇದೆ ಬರಬೇಕು. ಇದು ರಾಮನಗರ ಜಿಲ್ಲೆ ಅಂತಾ ಹೇಳಿ. ಬೇರೆ ಎಲ್ಲ ಮಾತನಾಡೋಕೆ ಆಗುತ್ತೆ ಮೀಟಿಂಗ್ ಅಟೆಂಡ್ ಮಾಡೋಕೆ ಆಗಲ್ವಾ ಎಂದು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಮೇಲೆ ಡಿಕೆ ಸುರೇಶ್ ಕಿಡಿಕಾರಿದ್ರು.
Advertisement
Advertisement
ನಿಮ್ ಎಸ್ಪಿಗೆ ಹೇಳು ಶಿಸ್ತು ಕಲಿತ್ಕೋಳಿ ಅಂತಾ ಗೊತ್ತಾಯ್ತಾ. ಇದು ಬೆಂಗಳೂರು ಸಿಟಿ ಅಲ್ಲ ರಾಮನಗರ ಜಿಲ್ಲೆ ನೆನಪಿರಲಿ. ಪೊಲೀಸ್ ಇಲಾಖೆನಲ್ಲಿ ಕೆಲಸ ಮಾಡ್ತಿರೋದು ಡಿಸಿಪ್ಲೈನ್ ಕಲಿತುಕೊಳ್ಳೋಕೆ ಹೇಳು. ಉಳಿದಿದ್ದನ್ನು ಅಮೇಲೆ ಮಾತನಾಡುತ್ತೇನೆ. ನಾನ್ ಹೇಳ್ದೆ ಎಂದು ನಿಮ್ ಎಸ್ಪಿಗೆ ಹೇಳಿ ಎಂದು ರಾಮನಗರ ಟೌನ್ ಸಬ್ ಇನ್ಸ್ ಪೆಕ್ಟರ್ ಹೇಮಂತ್ ಗೆ ಹೇಳಿದ ಸಂಸದ ಡಿಕೆ ಸುರೇಶ್ ಸೂಚಿಸಿದ್ದಾರೆ.
Advertisement
ಜಿಲ್ಲೆಗೆ ಬಂದಿರುವ ಅಧಿಕಾರಿಗಳೆಲ್ಲ ಇಲ್ಲಿ ಕೆಲಸ ಮಾಡ್ಕೊಂಡು ಇರಬೇಕು, ನಾನು ಅಷ್ಟು ದುಡ್ಡು ಇಷ್ಟು ದುಡ್ಡು ಕೊಟ್ಟು ಬಂದಿದ್ದೀನಿ ಅನ್ನೋದಲ್ಲ. ಕೆಲಸ ಮಾಡೋಕೆ ಬಂದಿದ್ದೀರಿ ಕೆಲಸ ಮಾಡ್ಕೊಂಡು ಹೋಗಬೇಕು ಅಷ್ಟೇ. ಹೊಸದಾಗಿ ಜಿಲ್ಲೆಗೆ ಬಂದಿರುವವರು ತಮ್ಮ ಪರಿಚಯ ಮಾಡಿಕೊಳ್ಳಿ ಎಂದು ಡಿಸಿಯಿಂದ ಹಿಡಿದು ಸಿಇಓ ಸೇರಿದಂತೆ ಹೊಸದಾಗಿ ಬಂದಿರುವ ಇಲಾಖೆಯ ಅಧಿಕಾರಿಗಳಿಗೆ ಸರೇಶ್ ಅವರು ಹೇಳಿದ್ದಾರೆ.
Advertisement
ಒಬ್ಬೊಬ್ಬರಾಗಿ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸಾರ್ವಜನಿಕ ಕೆಲಸ ಮಾತ್ರ ಮಾಡಬೇಕು. ಬೇರೆ ರೀತಿಯಲ್ಲಿ ಪಕ್ಷದವರು ಹೇಳಿದರು, ಮುಖಂಡರು, ಕಾರ್ಯಕರ್ತರು ಹೇಳೋದಲ್ಲ ಇಲ್ಲಿ ನಡೆಯಲ್ಲ. ಇಲ್ಲಿ ಅಗಲ್ಲ ಅನ್ನೋರು ಜಾಗ ಖಾಲಿ ಮಾಡ್ಕೊಂಡು ಹೋಗಿ ಎಂದು ಡಿಕೆ ಸುರೇಶ್ ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.