ರಾಮನಗರ: ಮಾಗಡಿ (Magadi) ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀ (Basavalinga Swamiji) ಆತ್ಮಹತ್ಯೆಗೆ ಟ್ವಿಸ್ಟ್ ದೊರೆತ್ತಿದ್ದು, ಅನಾಮಧೇಯನ ಹೆಸರಿನ ಮೇಲೆ ಎಫ್‍ಐಆರ್ ದಾಖಲಾಗಿದೆ. ಡೆತ್‍ನೋಟ್‍ನಲ್ಲಿ ಬಂಡೆಮಠದ (Bande Mutt) ಶ್ರೀ ಹಲವರ ಹೆಸರು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಕುದೂರು ಪೊಲೀಸರ ಎಫ್‍ಐಆರ್ ಮೇಲೆ ಅನುಮಾನ ಮೂಡಿಸಿದೆ. ಇಡೀ ಪ್ರಕರಣ ಮುಚ್ಚಿಹಾಕಲು ನಡೆಯುತ್ತಿದೆಯಾ ಯತ್ನ ಎಂಬ ಪ್ರಶ್ನೆ ಇದೀಗ ಮೂಡಿಬರುತ್ತಿದೆ.
ಸ್ವಾಮೀಜಿ ಸಾವಿಗೆ ಬೆದರಿಕೆಯೇ ಕಾರಣನಾ ಎಂಬ ಅನುಮಾನ ಮೂಡುತ್ತಿದ್ದು, ಸ್ವಾಮೀಜಿ ನೇಣಿಗೆ ಶರಣಾಗುವ ಮುನ್ನ ಶ್ರೀಗಳನ್ನು ಇಬ್ಬರು ವ್ಯಕ್ತಿಗಳು ಭೇಟಿ ಮಾಡಿದ್ದರು. ಆತ್ಮಹತ್ಯೆಯ ಹಿಂದಿನ ದಿನ ಸುಮಾರು ಅರ್ಧಗಂಟೆಗೂ ಹೆಚ್ವು ಕಾಲ ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆದಿತ್ತು. ಅವರಿಬ್ಬರ ಭೇಟಿ ಬಳಿಕ ಶ್ರೀಗಳು ವಿಚಲಿತರಾಗಿದ್ರಾ? ಶ್ರೀಗಳನ್ನು ಭೇಟಿ ಮಾಡಿದ್ದಾ ಆ ಇಬ್ಬರು ವ್ಯಕ್ತಿಗಳು ಯಾರು ಎಂಬ ಪ್ರಶ್ನೆಗಳೂ ಇದೀಗ ಮೂಡುತ್ತಿದೆ. ಮಠದ ಪೀಠಾಧ್ಯಕ್ಷ ಸ್ಥಾನ ಹಿಡಿಯಲು ಸಂಚು ರೂಪಿಸಿದ್ರಾ ಮತ್ತೊಬ್ಬ ಶ್ರೀ? ಮಹಿಳೆ ಜೊತೆ ಕೆಲವರು ಭಾಗಿಯಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ.
Advertisement
Advertisement
ಡೆತ್ ನೋಟ್‍ನಲ್ಲಿ ಏನಿದೆ?: ಸಿದ್ದಗಂಗಾ ಶ್ರೀಗಳಿಗೆ ಹಾಗೂ ಮಠದ ಭಕ್ತರಿಗೆ ಕೊನೆಯ ನನ್ನ ಶರಣು ಶರಣಾತ್ರಿಗಳು. ಪೂಜ್ಯರು ಹಾಗೂ ಮಠದ ಭಕ್ತರಲ್ಲಿ ನನ್ನ ಕೊನೆಯ ನಿವೇದನೆ ಏನಂದರೆ ನಾನು ಮಠದ ಉತ್ತರಾಧಿಕಾರಿಯಾಗಿ 25 ವರ್ಷಗಳು ಹೇಗೆ ಇದ್ದೆ ಎಲ್ಲರಿಗೂ ತಿಳಿದಿದೆ. ಇಷ್ಟು ದಿನ ನಾನು ಮಠದ ನಿಷ್ಠಾವಂತ ಸೇವಕನಾಗಿ ಪ್ರಾಮಾಣಿಕನಾಗಿ ಮಠದ ಸೇವೆ ಮಾಡಿದ್ದೇನೆ. ಹಿರಿಯ ಲಿಂಗೈಕ್ಯ ಶ್ರೀಗಳ ಪ್ರೀತಿ ಪಾತ್ರನಾಗಿ ಸೇವೆ ಮಾಡಿದ್ದೇನೆ. ಮಠದ ಹಣವನ್ನು ನನ್ನ ವೈಯಕ್ತಿಕ ಜೀವನಕ್ಕೆ, ಬಂಧುಗಳಿಗೆ, ಸ್ನೇಹಿತರಿಗೆ, ಕೊಟ್ಟಿಲ್ಲ. ದುಂದು ವೆಚ್ಚ ಮಾಡಿಲ್ಲ. ಎಲ್ಲವನ್ನೂ ಮಠದ ಕಾರ್ಯಗಳಿಗೆ ಉಪಯೋಗಿಸಿದ್ದೇನೆ. ಅಷ್ಟೆ ಪ್ರಾಮಾಣಿಕವಾಗಿ ಬದುಕಿದ್ದೇನೆ.
Advertisement
Advertisement
ಆದರೆ, ಈಗ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಕೆಟ್ಟ ವಿಚಾರದಲ್ಲಿ ನನ್ನ ಮೇಲೆ ಹೊರಿಸಿ, ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ನನ್ನ 25 ವರ್ಷದ ಜೀವನದಲ್ಲಿ ಕಷ್ಟದ ವಿಚಾರದಲ್ಲಿ ಅನುಭವಿಸಿದೆ. ಇತ್ತೀಚಿನ ದಿನಗಳಲ್ಲಿ ಕಷ್ಟಗಳು ಬೇರೆ ರೂಮರ್‍ಗಳಲ್ಲಿ ಗೊತ್ತಿಲ್ಲದ ಆರೋಪಗಳನ್ನ ಮಾಡಿದ್ದಾರೆ. ಇಷ್ಟು ದಿನ ನಾನು ಎಚ್ಚರಿಕೆಯಿಂದ ಇದ್ದೆ. ಆದರೆ, ಶತ್ರುಗಳ ನಿರಂತರ ಪ್ರಯತ್ನದಿಂದ ನನಗೆ ಕೊನೆಗೆ ಸಂಚು ಮಾಡಿದ್ದಾರೆ. 6-7 ತಿಂಗಳಿನಿಂದ ಗೊತ್ತಿಲ್ಲದ ಮಹಿಳೆ ನನಗೆ ದೂರವಾಣಿ ಮಾಡಿ ಮಾತನಾಡಿರುವುದು ಯಾರು ಅಂತ ಎಂದು ತಿಳಿಸಿದ್ದಾರೆ.
ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಎಸ್ಪಿ ಸಂತೋಷ್ ಬಾಬು ಸುದ್ದಿಗೋಷ್ಠಿ ಮಾಡಿದ ಅವರು, ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಗಳ ಶವ ಪತ್ತೆಯಾಗಿದೆ. ರೂಮಿನ ಕಿಟಕಿಯಲ್ಲಿ ನೇಣು ಹಾಕಿಕೊಳ್ಳಲಾಗಿದೆ. ಸ್ಥಳಕ್ಕೆ ನಮ್ಮ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಈ ಬಗ್ಗೆ ಮಠದ ಕಡೆಯಿಂದ ದೂರು ನೀಡಲಾಗಿದೆ. ಇದು ಅನ್ ನ್ಯಾಚುರಲ್ ಡೆತ್ ಅಂತ ದೂರು ನೀಡಲಾಗಿದೆ. ದೂರಿನ ಅನ್ವಯ 306ಕೇಸ್ ದಾಖಲಾಗಿದೆ ಎಂದರು.
ಸ್ಥಳದಲ್ಲಿ 3 ಪುಟಗಳ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಅಪರಿಚಿತ ವ್ಯಕ್ತಿ ಅಂತ ಉಲ್ಲೇಖ ಆಗಿದೆ. ಮಾನಸಿಕ ಕಿರುಕುಳ ನೀಡ್ತಿದ್ದಾರೆ ಅಂತ ಉಲ್ಲೇಖ ಇದೆ. ಆದರೆ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರ ಎರಡೂ ಫೋನ್‍ನ ವಶಕ್ಕೆ ಪಡೆದಿದ್ದೇವೆ. ಅದನ್ನೂ ಪರಿಶೀಲನೆ ಮಾಡಲಾಗ್ತಿದೆ. ಕೆಲವು ವ್ಯಕ್ತಿಗಳ ಹೆಸರು ಸಹ ಡೆತ್ ನೋಟ್‍ನಲ್ಲಿದೆ. ಇವರಿಂದ ಮನಸ್ಸಿಗೆ ಬೇಸರವಾಗಿದೆ ಅಂತ ಬರೆಯಲಾಗಿದೆ. ಆದರೆ ಅವರಿಂದ ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಅಂತ ಉಲ್ಲೇಖ ಇಲ್ಲ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?
ಸ್ಥಳದಲ್ಲಿ ಸಿಕ್ಕಿದ್ದು 3 ಪುಟಗಳ ಡೆತ್ ನೋಟ್ ಮಾತ್ರ. ಈ ಬಗ್ಗೆ ಸಾಕಷ್ಟು ರೂಮರ್ ಗಳು ಹಬ್ಬುತ್ತಿವೆ, ತನಿಖೆ ನಡೆದ ಬಳಿಕ ಸತ್ಯಾಂಶ ಹೊರಬೀಳಲಿದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಸಂಪೂರ್ಣ ಮಾಹಿತಿ ನೀಡಲು ಸಾಧ್ಯವಿಲ್ಲ. ಇದರಿಂದ ಆರೋಪಿಗಳು ಸಾಕ್ಷ್ಯನಾಶ ಮಾಡುವ ಸಂಭವವಿದೆ. ಪ್ರಕರಣ ತನಿಖೆಯಲ್ಲಿ ನಮಗೆ ಯಾವುದೇ ಒತ್ತಡವಿಲ್ಲ. ಸ್ವತಂತ್ರವಾಗಿ, ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಬಸವಲಿಂಗ ಶ್ರೀಗಳ ಸಾವಿನ ಸುತ್ತ ಅನುಮಾನಗಳ ಹುತ್ತ – 3 ಪುಟಗಳ ಡೆತ್‍ನೋಟ್ ರಹಸ್ಯ ಬಯಲು!