ರಾಮನಗರ: ರಾಮನ ನೆಲೆಯಿರುವ, ದೈವವಿರುವ ರಾಮನಗರವನ್ನು ಯೇಸು ನಗರವನ್ನಾಗಿಸಲು ಬಿಡುವುದಿಲ್ಲ. ಕಾಕಾಸುರನನ್ನು ಸಂಹಾರ ಮಾಡಿದ ಧರ್ಮಕ್ಕೆ ಕಾಗೆಗಳನ್ನು ಸಂಹರಿಸುವುದು ದೊಡ್ಡ ವಿಷಯವಲ್ಲ ಎಂದು ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೂ ಸಹ ರಾಮನಗರದ ಮೊಮ್ಮಗ ಎಂಬುದನ್ನು ಡಿ.ಕೆ ಸಹೋದರರು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ಕೆಂಪೇಗೌಡರ ಮಕ್ಕಳು ಎನ್ನುವಂತೆ, ನಾನು ಸಹ ರಾಮನಗರ ಜಿಲ್ಲೆಯ ಕಾಳೇಗೌಡರ ಮೊಮ್ಮಗ ಎಂದರು. ಇದನ್ನೂ ಓದಿ: ಕೆಂಪೇಗೌಡ್ರ ಮಗ ಅಂತೀರಲ್ಲ, ಹಾಗೇ ನಾನು ಕಾಳೇಗೌಡ್ರ ಮೊಮ್ಮಗ- ಡಿಕೆಶಿಗೆ ಸ್ವಾಮೀಜಿ ಟಾಂಗ್
Advertisement
Advertisement
ಹಾರೋಬೆಲೆಯ ಕಪಾಲ ಬೆಟ್ಟಕ್ಕೆ ಈ ಹಿಂದೆ ಜನವರಿ 20ರಂದು ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದೆ. ಆದರೆ ಹಿಂದೂ ಧರ್ಮದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಕಲ್ಕಡ್ ಪ್ರಭಾಕರ ಭಟ್ ಅವರು ಕನಕಪುರ ಚಲೋ ವೇಳೆ ಪ್ರತಿಮೆ ನಿರ್ಮಾಣದ ಸಲುವಾಗಿ ತಂದಿರುವ ಕಲ್ಲುಗಳನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಜನವರಿ 25ರ ವರೆಗೆ ಗಡವು ನೀಡಿದ್ದಾರೆ. ಹಿರಿಯರ ಮಾತಿಗೆ ಬೆಲೆ ನೀಡಿ ನಮ್ಮ ಪಾದಾಯಾತ್ರೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದೇವೆ. ಒಂದು ವೇಳೆ ಗಡವು ಮುಗಿದರೂ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದಿದ್ದರೇ ಧರ್ಮದ ಮುಖಂಡರನ್ನು ಸೇರಿಸಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
Advertisement
ಕಂದಾಯ ಸಚಿವ ಆರ್.ಅಶೋಕ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಡುವಿನ ಸ್ನೇಹಿವಿದ್ದರೇ, ನಮ್ಮ ಆಕ್ಷೇಪಗಳೇನು ಇಲ್ಲ. ಆದರೆ ಇವರ ಸ್ನೇಹದಿಂದಾಗಿ ಧರ್ಮಕ್ಕೆ ದ್ರೋಹವಾಗಬಾರದು. ಸಚಿವ ಅಶೋಕ್ ಅವರು ಮನಸ್ಸು ಮಾಡಿದರೆ ಗಂಟೆಗಳಲ್ಲೇ ಹಾರೋಬೆಲೆಯ ಮಾಹಿತಿಯನ್ನು ತರಿಸಿಕೊಳ್ಳಬಹುದು. ಆದರೆ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ರಾಕ್ಷಸರ ವಿರುದ್ಧವಾಗಿ ಏಕಾಂಗಿಯಾಗಿ ಹೋರಾಟ ಮಾಡಲು ಸಾಧ್ಯವಿಲ್ಲ. ಧರ್ಮ ವಿರೋಧಿಗಳ ನಡುವೆ, ಗುಂಪಾಗಿ ಹೋರಾಟ ಮಾಡಬೇಕು. ಕಪಾಲ ಬೆಟ್ಟದ ಸುತ್ತಮುತ್ತಲಿನಲ್ಲಿ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಹೆಸರಿಗೆ ಮಾಡಿಸಿಕೊಳ್ಳಲಾಗುತ್ತಿದೆ. ಇವುಗಳನ್ನು ತಡೆಯಬೇಕಿದೆ ಎಂದು ತಿಳಿಸಿದರು.
ಹಿಂದೂ ಧರ್ಮದವರು ಜಾಗೃತರಾಗಬೇಕಾಗಿದೆ. ಜತೆಗೆ ಬೇರೆ ಧರ್ಮದವರಿಗೆ ಅವರದ್ದೇ ಆದಾ ರಾಷ್ಟ್ರಗಳಿಗಿವೆ. ಆದರೆ, ಹಿಂದೂಗಳಿಗೆ ಇರುವುದೊಂದೇ ರಾಷ್ಟ್ರ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.