ರಾಮನಗರ: ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಟ್ರೋಲ್ ಮಾಡಿದರೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬ ದುರುದ್ದೇಶದಿಂದ ಬಿಜೆಪಿಯವರು ಟ್ರೋಲ್ ಮಾಡಿದ್ದಾರೆ ಎಂದು ರಾಮನಗರ ಜಿಲ್ಲಾ ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.
ರಾಮನಗರ ತಾಲೂಕು ಅಧ್ಯಕ್ಷ ರಾಜಶೇಖರ್ ಸುದ್ದಿಗೋಷ್ಠಿ ನಡೆಸಿ ಟ್ರೋಲ್ ಮಾಡಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧವಾಗಲೀ, ಸಿಎಂ ಕುಮಾರಸ್ವಾಮಿಯವರ ಬಗ್ಗೆ ಹಗುರವಾಗಿ ಮಾತನಾಡಿದರೆ ಅದರ ಪರಿಣಾಮವನ್ನ ಎದುರಿಸಬೇಕಾಗುತ್ತೆ ಎಂದಿದ್ದಾರೆ.
Advertisement
Advertisement
ನಗರದಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗಿತ್ತಿದೆ. ಇವರಿಗೆ ನೀರಿನ ಸಮಸ್ಯೆ ಇದ್ದರೆ ಜಲಮಂಡಳಿ ಬಳಿ, ಇಲ್ಲವೇ ನಗರಸಭೆ ಬಳಿ ಪ್ರತಿಭಟನೆ ನಡೆಸಿ ಸಮಸ್ಯೆ ಹೇಳಿಕೊಳ್ಳಬೇಕಿತ್ತು. ನೀರು ಬಿಡೋಕೆ ಶಾಸಕಿಯವರೇನೂ ವಾಟರ್ ಬೋರ್ಡ್ ನಲ್ಲಿ ಕೆಲಸಕ್ಕೆ ಇರುವವರಾ ಎಂದು ಪ್ರಶ್ನಿಸಿದರು. ಅಲ್ಲದೇ ಇದೇ ರೀತಿ ಯಾರೇ ಟ್ರೋಲ್ ಮಾಡಿದರು ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನ ಎದುರಿಸಬೇಕಾಗುತ್ತೆ ಎಂದು ಜೆಡಿಎಸ್‍ನ ಸ್ಥಳೀಯ ನಾಯಕರು ಎಚ್ಚರಿಕೆ ನೀಡಿದರು.
Advertisement
ಕುಡಿಯುವ ನೀರಿನ ವಿಚಾರವಾಗಿ ರಾಮನಗರದ ವಿನೋದ್ ಹಾಗೂ ರುದ್ರದೇವ್ ಎಂಬವರು ಶಾಸಕಿ ಅನಿತಾ ಕುಮಾರಸ್ವಾಮಿಯವರು ಕ್ಷೇತ್ರದತ್ತ ಬರಬಹುದು ಎಂದು ಅನಿತಕ್ಕಾ ಎಲ್ಲಿದ್ದಿರೀ ಎಂದು ಟ್ರೋಲ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕ್ಷೇತ್ರದ ನೀರಿನ ಸಮಸ್ಯೆಯನ್ನು ತೆರೆದಿಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿತ್ತು. ಇದನ್ನು ಓದಿ: ಮಗನ ಬಳಿಕ ಅಮ್ಮನ ಸರದಿ- `ಅನಿತಕ್ಕಾ ಎಲ್ಲಿದ್ದೀರಾ?’ ಅಭಿಯಾನ ಶುರು