Connect with us

Districts

ಜಾನಪದ ಲೋಕದಲ್ಲಿ ಕಣ್ಮನ ಸೆಳೆದ ಈಶಾನ್ಯ ರಾಜ್ಯಗಳ ಬುಡಕಟ್ಟು ನೃತ್ಯ

Published

on

ರಾಮನಗರ: ವಿಶ್ವ ಜಾನಪದ ದಿನಾಚರಣೆಯ ನಿಮಿತ್ತ ನಗರದ ಜಾನಪದ ಲೋಕದ ಆವರಣದಲ್ಲಿ ಜನಪದ ಕಲೆಗಳ ಉತ್ಸವ ಏರ್ಪಡಿಸಲಾಗಿತ್ತು.   ವಿವಿಧ ಬುಡಕಟ್ಟು  ನೃತ್ಯ, ಜಾನಪದ  ಕುಣಿತಗಳನ್ನು ನೋಡಿ ಪ್ರೇಕ್ಷಕರು  ಖುಷಿ ಪಟ್ಟರು.

ಈಶಾನ್ಯ ಭಾರತದ ಸಪ್ತ ಸಹೋದರಿಯರು ಎಂದೇ ಗುರುತಿಸುವ ಅರುಣಾಚಲ ಪ್ರದೇಶ ಬ್ರೊ-ಜಾಯಿ, ಮೇಘಾಲಯದ ಶಾದ್ ಸ್ನೆಗೈಘಿ, ಅಸ್ಸಾಂನ ದಮಾಯಿ ಕಿಕನ್, ಮಣಿಪುರದ ಲೈಹಾರೊಬ ಟಾಂಗ್ಸ್, ತ್ರಿಪುರದ ಹೋಜಾಗಿರಿ, ಮಿಜೋರಾಂನ ಸರ್ಲಾಮೈ, ನ್ಯಾಗಾಲ್ಯಾಂಡ್‍ನ ಯುದ್ಧ ವೀರ ಕುಣಿತ, ಸಿಕ್ಕಿಂನ ಜನಪದ ಕಲೆಗಳ ಅನಾವರಣಗೊಂಡವು. ಈಶಾನ್ಯ ರಾಜ್ಯಗಳ ಸಂಸ್ಕೃತಿ, ಉಡುಗೆ ತೊಡುಗೆ, ನೃತ್ಯ, ಜನತೆಯನ್ನು ರೋಮಾಂಚನಗೊಳಿಸಿದವು. ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ವೀಕ್ಷಕರ ಗಮನ ಸೆಳೆಯಿತು.

ಕರ್ನಾಟಕ ಜಾನಪದ ಪರಿಷತ್ತು, ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತು, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಕರ್ನಾಟಕ ಸಹಾಸ ಕಲಾ ಅಕಾಡಮಿ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ತ್ರಿಪುರ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕದ 20ಕ್ಕೂ ಹೆಚ್ಚು ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಅರುಣಾಚಲ ಪ್ರದೇಶದ ಬುಡಕಟ್ಟು ಜನಾಂಗದ ಬ್ರೋಜಾಯ್ ನೃತ್ಯ, ಅಸ್ಸಾಂನ ಶಾಲ್ಸ್ ವಜ್ಞೆ, ತ್ರಿಪುರದ ಗೋಜಾಗಿರಿ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆದವು. ಆಂಧ್ರ ಪ್ರದೇಶದ ಹುಲಿ ವೇಷದ ಕುಣಿತ, ಕರ್ನಾಟಕದ ಜನಪದ ಕುಣಿತ, ಡೊಳ್ಳು ಕುಣಿತ ಸೇರಿದಂತೆ ಹಲವು ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಲಾಯಿತು.

ಇದೇ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾನಕಿ ಅವರು, ಜಾನಪದ ಶ್ರಮ ಸಂಸ್ಕೃತಿಯ ಪ್ರತೀಕ, ನಾಗರೀಕ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆ ನೀಡುತ್ತ ಬಂದಿದೆ. ಬೇರೆ ಬೇರೆ ಸಿದ್ಧಾಂತಗಳಿಗೆ ಹೋಲಿಕೆ ಮಾಡಿದರೆ ಜಾನಪದ ಶ್ರಮದ ಮೂಲತೆಯನ್ನು ಹೊಂದಿದೆ ಎಂದು ಹೇಳಿದರು. ಜೊತೆಗೆ, ರಾಜ್ಯದಲ್ಲಿ ನಕಲಿ ಕಲಾವಿದರು ಹಾಗೂ ಕಲಾಸಂಘ ಸಂಸ್ಥೆಗಳು ಕಂಡುಬಂದರೆ ಕೂಡಲೇ ಕ್ರಮ ಜರಗಿಸುವುದಾಗಿ ತಿಳಿಸಿದರು.

ಗೀಗಿಮೇಳ ಕಲಾವಿದೆ ಶಕುಂತಲಾ ನಾಯಕ್, ಗೊರವ ಕಲಾವಿದ ಮೈಲಾರಪ್ಪಘಿ, ಪಂಡರಿಭಜನೆ ತೋಪಲ್ಲಿ ಬಸವರಾಜು, ಗೊರವ ಕಲಾವಿದ ಪೂಜಾರಿ ಮಲ್ಲಯ್ಯಘಿ, ನೀಲಗಾರರ ಕಲಾವಿದ ಪುರಿಗಾಲಿ ಮಹಾದೇವಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ತೊಗಲು ಗೊಂಬೆ ಕಲಾವಿದೆ ಗೌರಮ್ಮಘಿ, ಜಾನಪದ ಲೋಕ ಆಡಳಿತಾಕಾರಿ ಡಾ.ಕುರುವ ಬಸವರಾಜ್, ಕಲಾವಿದ ಜೋಗಿಲ ಸಿದ್ದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರಾಜು, ಸೇರಿದಂತೆ ಇತರರು ಹಾಜರಿದ್ದರು.

Click to comment

Leave a Reply

Your email address will not be published. Required fields are marked *