ರಾಮನಗರ: ರಾಜ್ಯಕ್ಕೆ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು (Chief Minister) ಕೊಟ್ಟ ಹೆಗ್ಗಳಿಕೆಗೆ ರಾಮನಗರ (Ramanagara) ಜಿಲ್ಲೆ ಪಾತ್ರವಾಗಿದೆ. ರಾಜಕೀಯ (Politics) ಘಟನಾವಳಿಗಳ ತವರಾಗಿರುವ ರಾಮನಗರದ ರಾಜಕೀಯ ಇತಿಹಾಸವೇ ರೋಚಕ.
ರಾಜ್ಯದ ಎರಡನೇ ಮುಖ್ಯಮಂತ್ರಿ ಹಾಗೂ ಮೊದಲ ಚುನಾಯಿತ ಮುಖ್ಯಮಂತ್ರಿ ಎಂದೇ ಹೆಸರುವಾಸಿಯಾಗಿರುವ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ (Kengal Hanumanthaiah) ಸ್ಪರ್ಧೆ ಮಾಡಿದ್ದು ಇದೇ ರಾಮನಗರ ಕ್ಷೇತ್ರದಲ್ಲಿ. 1952ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್ ಹನುಮಂತಯ್ಯ, ಅಂದಿನ ಮೈಸೂರು (Mysuru) ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಮೂಲತಃ ರಾಮನಗರ ತಾಲೂಕಿನ ಲಕ್ಕಪ್ಪನಹಳ್ಳಿಯಲ್ಲಿ ಜನಿಸಿದ್ದ ಕೆಂಗಲ್ ಹನುಮಂತಯ್ಯ ಸ್ವಾತಂತ್ರ‍್ಯ ಹೋರಾಟದಲ್ಲಿಯೂ ಭಾಗಿಯಾಗಿದ್ದರು. 1952ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತವನ್ನು ನೀಡಿದ್ದರು. ಇದನ್ನೂ ಓದಿ: ಜಾತಿ ಬಲ ಇಲ್ಲದಿದ್ದರೂ, ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್
Advertisement
Advertisement
1983ರಲ್ಲಿ ರಾಮಕೃಷ್ಣ ಹೆಗಡೆ (Ramakrishna Hegde) ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಶಾಸಕರಾಗಿರಲಿಲ್ಲ. ಹೀಗಾಗಿ ಕನಕಪುರ (Kanakapura) ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ
Advertisement
1994ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹೆಚ್.ಡಿ ದೇವೇಗೌಡರು (H.D.Deve Gowda) ಸಿಎಂ ಸ್ಥಾನ ಅಲಂಕರಿಸಿದ್ದರು. ಬಳಿಕ 1996ರಲ್ಲಿ ವಿಧಾನಸಭೆಗೆ ರಾಜಿನಾಮೆ ನೀಡಿ ಪ್ರಧಾನಿ ಹುದ್ದೆಗೇರಿದರು. ಆಗ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಚುನಾವಣೆಗೆ ಅಂಬರೀಶ್ (Ambareesh) ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್‌ನ (Congress) ಸಿ.ಎಂ.ಲಿಂಗಪ್ಪ ಅವರ ಎದುರು ಅಂಬರೀಶ್ ಸೋಲುಂಡಿದ್ದರು. ಇದನ್ನೂ ಓದಿ: ದೇವರು ಮಗಳ ರೂಪದಲ್ಲಿ ಉಡುಗೊರೆ ಕಳುಹಿಸಿದ್ದಾರೆ – ಮೊದಲ ಮಗುವನ್ನು ಸ್ವಾಗತಿಸಿದ ತೇಜಸ್ವಿ ಯಾದವ್
Advertisement
2004ರಲ್ಲಿ ರಾಮನಗರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ಮುಖ್ಯಮಂತ್ರಿಯಾಗಿ 20 ತಿಂಗಳ ಅಧಿಕಾರ ನಡೆಸಿ ಮನೆಮಾತಾಗಿದ್ದರು. ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹೆಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದರು. ಅವರು ರಾಮನಗರ ಕ್ಷೇತ್ರ ತೊರೆದು, ಚನ್ನಪಟ್ಟಣ (Channapatna) ಕ್ಷೇತ್ರವನ್ನು ಉಳಿಸಿಕೊಂಡರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ್ ಇಂದು ರಾಜೀನಾಮೆ
ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು (ರಾಮನಗರ, ಕನಕಪುರ, ಚನ್ನಪಟ್ಟಣ) ತಾಲೂಕುಗಳಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ಅದರಲ್ಲೂ ರಾಮನಗರ ಕ್ಷೇತ್ರಕ್ಕೆ ಮೂರು ಬಾರಿ ಸಿಎಂ ಹುದ್ದೆ ದೊರೆತಿದೆ. ಆದರೆ, ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದ ಯಾವೊಬ್ಬ ನಾಯಕರೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ವಿಶೇಷ. ಇದನ್ನೂ ಓದಿ: ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್