ರಾಮನಗರ: ಕಾಂಗ್ರೆಸ್ ನಲ್ಲಿನ ಕೆಲವು ನಾಯಕರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂಬ ಆಸೆಯಿದ್ದು, ಸಿದ್ದರಾಮಯ್ಯನವರೇ ನಾವು ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಿಲ್ಲ ಅಂತೇಳಿದ್ದಾರೆ. ಹಾಗಾಗಿ ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿರುಬಹುದು ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸ್ವಕ್ಷೇತ್ರದ ಚನ್ನಪಟ್ಟಣದ ಹಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಅಲ್ಲದೇ ಗುಡ್ಡೆ ತಿಮ್ಮಸಂದ್ರ ಗ್ರಾಮದಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ವಿಧಾನಪರಿಷತ್‍ನ ಪಕ್ಷೇತರ ಅಭ್ಯರ್ಥಿ ಸಮಾನ ಮನಸ್ಕರ ಮತ ಪಡೆಯಲು ಪ್ರಯತ್ನ ಪಡುತ್ತೇವೆ ಅವಕಾಶ ಕೊಡಿ ಎಂದು ರೇವಣ್ಣರನ್ನ ಭೇಟಿ ಮಾಡಿದ್ದರು. ಅದಕ್ಕಾಗಿ ರೇವಣ್ಣನವರು ಅರ್ಜಿ ಹಾಕಲು 10 ಶಾಸಕರ ಸಹಿ ಹಾಕಿಸಿಕೊಟ್ಟಿದ್ದರು ನನ್ನನ್ನ ಕೇಳಿ ಅವರು ನಾಮಪತ್ರ ಹಾಕಿಲ್ಲ ಎಂದು ತಿಳಿಸಿದರು.
Advertisement
Advertisement
ಅಲ್ಲದೆ ಕಾಂಗ್ರೆಸ್ಸಿನಲ್ಲಿ ಕೆಲವು ನಾಯಕರಿಗೆ ಹಾಗೂ ಯಾರು ಸರ್ಕಾರ ತರುವ ನಿಟ್ಟಿನಲ್ಲಿ ಪರೋಕ್ಷವಾಗಿ ಬೆಂಬಲ ನೀಡಿದ್ದರೋ ಅವರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂಬ ಆಸೆಯಿದೆ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಅಪ್ ಸ್ಟೈನ್ ಆಗಬೇಕೆಂಬ ನಿರ್ಧಾರದ ಮಾತಿದೆ. ಆ ರೀತಿ ಇದ್ದಾಗ 25 ಏನೂ 68 ಮತಗಳು ಬಿಜೆಪಿಗೆ ಬಂದ ರೀತಿ ಅಲ್ವಾ. ಎಂಎಲ್‍ಸಿ ಚುನಾವಣಾ ಸಂಬಂಧ ನಾನು ಯಾವುದೇ ಗಮನ ಕೊಟ್ಟಿಲ್ಲ ನನ್ನದೇನು ಜವಾಬ್ದಾರಿಯೂ ಅಲ್ಲಿಲ್ಲ ಎಂದರು.
Advertisement
Advertisement
ಇದೇ ವೇಳೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಎಪಿ ರಂಗನಾಥ್ ಘೋಷಣೆ ಮಾಡಲಾಗಿದೆ. ಬೇರೆಯವರ ರೀತಿ ಅಮಿತ್ ಶಾ, ಮೋದಿ ಫೋಟೋ ಹಾಕಿಕೊಂಡು ಟಿಫನ್ ಬಾಕ್ಸ್ ಕೊಡ್ತಿದ್ದಾರಲ್ಲ ಆ ರೀತಿಯ ಕೆಲಸ ಮಾಡುತ್ತಿಲ್ಲ ಎಂದು ಚುನಾವಣಾ ಪ್ರಚಾರರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಪುಟ್ಟಣ್ಣಗೆ ಟಾಂಗ್ ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಬದಲಾವಣೆ ವಿಚಾರವಾಗಿ ಬಸವರಾಜ್ ಯತ್ನಾಳ್ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ನಾನಂತೂ ಭವಿಷ್ಯಗಾರನಲ್ಲ ಜ್ಯೋತಿಷಿಯಲ್ಲ ರಾಜಕೀಯದ ಕೆಲವು ಬೆಳವಣಿಗೆ ಬಗ್ಗೆ ಹೇಳಿರಬಹುದು ಎಂದು ತಿಳಿಸಿದರು.