ರಾಮನಗರ: ಕೊರೊನಾ ವಾರಿಯರ್ಸ್ ಗೆ ಇಂದು ಸನ್ಮಾನ ಮಾಡಲಾಯ್ತು. ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ರಾಮನಗರ ತಾಲೂಕಿನ ಕೊರೊನಾ ವಾರಿಯರ್ಸ್ ಗೆ ಶಾಲು ಹಾರ ಹಾಕಿ ಸನ್ಮಾನಿಸಿ ತಲಾ 5 ಸಾವಿರ ರೂಪಾಯಿಗಳ ನಗದು ನೀಡುವಂತಕ ಕೆಲಸ ಮಾಡಲಾಯ್ತು.
ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸನ್ಮಾನ ನಡೆಸಲಾಯಿತು. ಸನ್ಮಾನದ ಮೂಲಕ ಎಲ್ಲ ಕೊರೊನಾ ವಾರಿಯರ್ಸ್ ಗೆ ಧನ್ಯವಾದ ಹೇಳಲಾಯ್ತು. ಸಾಂಕೇತವಾಗಿ ಮಾಯಾಗನಹಳ್ಳಿಯಲ್ಲಿನ ತಮ್ಮ ನಿವಾಸದ ಬಳಿಯಲ್ಲಿ ಇಬ್ಬರು ದಾದಿಯರು, 7 ಮಂದಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಿ, ಥ್ಯಾಂಕ್ಯೂ ಎನ್ನುವ ಮೂಲಕ ತಲಾ 5 ಸಾವಿರ ರೂಪಾಯಿಗಳ ಚೆಕ್ ವಿತರಣೆ ಮಾಡಿದರು.
Advertisement
Advertisement
ರಾಮನಗರ ತಾಲೂಕಿನಲ್ಲಿ 200ಕ್ಕೂ ಹೆಚ್ಚು ಮಂದಿ ಕೊರೊನಾ ವಾರಿಯರ್ಸ್ ಸೇವೆ ಸಲ್ಲಿಸುತ್ತಿದ್ದಾರೆ. ಇವರುಗಳು ಮನೆ-ಮಠ ಬಿಟ್ಟು ನಮಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾವಿನೊಂದಿಗೆ ಸೆಣೆಸಾಟ ನಡೆಸುತ್ತಿರುವ ಇಂತಹ ರಿಯಲ್ ಹೀರೋಗಳಿಗೆ ಸ್ಥೈರ್ಯ ತುಂಬುವುದರೊಂದಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರುವ ಕೆಲಸಗಳು ಹಾಲಿನ ಡೈರಿಗಳ ನಡೆಯುತ್ತಿರುವುದು ವಿಶೇಷವಾಗಿದೆ.
Advertisement
ತಾಲೂಕಿನಲ್ಲಿರುವ ದಾದಿಯರು, ಆಶಾ ಕಾರ್ಯಕರ್ತೆರುಗಳಿಗೆ ಹಾರ ಹಾಕಿ, ಶಾಲು ಹೊದಿಸಿ, 5 ಸಾವಿರ ರೂ.ಗಳ ಚೆಕ್ ನೀಡುವ ಮೂಲಕ ಯು ಸೇವ್ಡ್ ಮೈ ಲೈಫ್ ಥಾಂಕ್ಯೂ ಎನ್ನುವ ಕೆಲಸ ನಡೆಯಲಿದೆ. ಇಂತಹ ಕಾರ್ಯಕ್ರಮಗಳಿಂದಾಗಿ ಹಗಲಿರುಳು ಸೇವೆ ಸಲ್ಲಿಸುತ್ತರುವ ವಾರಿಯರ್ಸ್ ಗಳಿಗೆ ಇನ್ನಷ್ಟು ಪ್ರೋತ್ಸಾಹ ತುಂಬಬಹುದು ಎನ್ನುತ್ತಾರೆ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್.