– ಕೊರೊನಾ ಭೀತಿಯಲ್ಲಿ ರೇಷ್ಮೆನಗರಿ ಜನ
ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಇದೀಗ ಕೊರೊನಾ ಭೀತಿ ಶುರುವಾಗಿದ್ದು, ಜರ್ಮನಿಯಿಂದ ವಾಪಸ್ ಬಂದ ಯುವತಿ ಆಸ್ಪತ್ರೆಗೆ ದಾಖಲಾಗಿರುವುದು ಸಾರ್ವಜನಿಕರ ಆತಂಕವನ್ನುಂಟು ಮಾಡಿದೆ.
ಚನ್ನಪಟ್ಟಣ ನಗರದ ಯುವತಿ ಕಳೆದ ಒಂದು ವರ್ಷದಿಂದ ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಯಲ್ಲಿದ್ದಳು. ವ್ಯಾಸಂಗ ಮುಗಿಸಿ ಕಳೆದ ಮೂರು ದಿನಗಳ ಹಿಂದೆ ಪಟ್ಟಣಕ್ಕೆ ಆಗಮಿಸಿದ್ದಳು. ಭಾನುವಾರ ಸಂಜೆ ಯುವತಿಗೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಯುವತಿಯ ತಂದೆಯೇ ಸ್ವತಃ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
Advertisement
Advertisement
ಬೆಳಗ್ಗೆ ನೇರವಾಗಿ ಜಿಲ್ಲಾಸ್ಪತ್ರೆಯ ಕೊರೊನಾ ಸೋಂಕು ಘಟಕಕ್ಕೆ ಯುವತಿ ತನ್ನ ಪೋಷಕರ ಜೊತೆ ಆಗಮಿಸಿದ್ದು, ಸ್ಕ್ರೀನಿಂಗ್ ಒಳಗಾಗಿದ್ದಾಳೆ. ಯುವತಿಯ ಜೊತೆಗೆ ಆಕೆಯ ಸಂಪರ್ಕದಲ್ಲಿದ್ದ ಪೋಷಕರ ಪರೀಕ್ಷೆಯೂ ನಡೆಸಲಾಗಿದೆ. ಅಲ್ಲದೇ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ಜನರ ಗಂಟಲು ದ್ರವವನ್ನು ಹಾಗೂ ರಕ್ತದ ಪರೀಕ್ಷೆಗಾಗಿ ಸ್ಯಾಂಪಲ್‍ನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‍ಓ ಹೇಳಿದ್ದಾರೆ.
Advertisement
ಸಾರ್ವಜನಿಕರು ಯಾವುದೇ ರೀತಿಯ ಆಂತಕಕ್ಕೆ ಒಳಗಾಗಬೇಕಿಲ್ಲ. ಇದು ಶಂಕಿತ ಪ್ರಕರಣ ಅಷ್ಟೇ ವರದಿ ಪಡೆಯಲು ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗಿದೆ. ಮುನ್ನೆಚರಿಕಾ ಕ್ರಮವಹಿಸುವುದು ಉತ್ತಮ ಎಂದು ಡಿಎಚ್‍ಓ ಡಾ.ನಿರಂಜನ್ ತಿಳಿಸಿದರು.
Advertisement
ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ಕಂಡುಬಂದಿಲ್ಲ. ಹೊರದೇಶದಿಂದ ಹಾಗೂ ಹೊರಭಾಗದಿಂದ ಬರುವವರ ಮೇಲೆ ಕಣ್ಣಿಡಲಾಗುತ್ತಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿರುವ ಯುವತಿ ಹಾಗೂ ಪೋಷಕರ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಯುವತಿಗೆ ಕೇವಲ ಜ್ವರ ಮಾತ್ರವೇ ಇರುವುದು ನೆಗಡಿ, ಕೆಮ್ಮು ಇಲ್ಲ. ಹಾಗಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ತಿಳಿಸಿದರು.