ರಾಮನಗರ: ಕೆಎಸ್ಆರ್‌ಟಿಸಿ ಬಸ್ ನಲ್ಲಿ (KSRTC Bus) ಖಾಸಗಿ ವ್ಯಕ್ತಿಯೋರ್ವ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡ್ತಿದ್ದ ಪ್ರಕರಣ ಸಂಬಂಧ ಬಸ್ ನಿರ್ವಾಹಕನನ್ನ (Bus Conductor) ಅಮಾನತು ಮಾಡಲಾಗಿದೆ.
ಕನಕಪುರ ಡಿಪೋಗೆ ಸೇರಿದ KA42-F0746 ಕೆಎಸ್ಆರ್‌ಟಿಸಿ ಬಸ್‌ನಲ್ಲಿ ನಿರ್ವಾಹಕ ಇದ್ರೂ ಕೂಡ ಖಾಸಗಿ ವ್ಯಕ್ತಿ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡ್ತಿದ್ದ ಜೊತೆಗೆ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿ, ಪುರುಷರು ಹಣ ಕೊಟ್ರೂ ಟಿಕೆಟ್ ನೀಡದೇ ರಾಜರೋಷವಾಗಿ ಅಧಿಕಾರಿಗಳಿಗೆ ಮಾಮೂಲಿ ಕೊಡ್ತೀವಿ, ನಮ್ಮ ಬಸ್ ಚೆಕ್ಕಿಂಗ್ ಮಾಡಲು ಯಾರೂ ಬರಲ್ಲ ಎಂದಿದ್ದ. ಇದನ್ನೂ ಓದಿ: KSRTC ಬಸ್‌ನಲ್ಲಿ ಖಾಸಗಿ ವ್ಯಕ್ತಿಯಿಂದ ಟಿಕೆಟ್ ವಿತರಣೆ – ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
ಇದನ್ನ ಪ್ರಯಾಣಿಕನೋರ್ವ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಬಗ್ಗೆ ಬೆಳಿಗ್ಗೆ ʻಪಬ್ಲಿಕ್ ಟಿವಿʼಯಲ್ಲಿ (Public TV) ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದ ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕನನ್ನ ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಸತೀಶ್ Vs ಲಕ್ಷ್ಮಿ ಕ್ರೆಡಿಟ್ ಕಾಳಗ | ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಾನು 1.27 ಕೋಟಿ ನೀಡಿದ್ದೇನೆ: ರಮೇಶ್
ನಿರ್ವಾಹಕ ನವೀನ್ ನನ್ನ ಅಮಾನತು ಮಾಡಿ ರಾಮನಗರ (Ramanagara) ವಿಭಾಗದ ಶಿಸ್ತುಪಾಲನಾ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಟಿಕೆಟ್ ನೀಡಿದ್ದ ಖಾಸಗಿ ವ್ಯಕ್ತಿ ವಿರುದ್ದ ಕೋಡಿಹಳ್ಳಿ ಪೋಲಿಸ್ ಠಾಣೆಗೆ ಕನಕಪುರ ಡಿಪೋ ಮ್ಯಾನೇಜರ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲೆ – ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು