– ಮನೆಗೊಂದು ಮರದಂತೆ ಮನೆಗೊಬ್ಬ ಕ್ರೀಡಾಪಟುವಿರಲಿ
ರಾಮನಗರ: ಬೆರಣಿ ತಟ್ಟಿದ ಕೈಗೆ ಅರ್ಜುನ ಪ್ರಶಸ್ತಿ ಬಂತು ಎಂದು ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಚನ್ನಪಟ್ಟಣದ ಹೊರವಲಯದಲ್ಲಿರುವ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಷನ್‌ನಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಮನೆಗೊಂದು ಮಗು, ಮಗುವಿಗೊಂದು ಮರ ಎಂಬಂತೆ ಮನೆಗೊಬ್ಬ ಕ್ರೀಡಾಪಟು ಕೂಡ ಹೊರಬರಲಿ. ದೇಶದ ಉದ್ದಗಲಕ್ಕೂ ಕಬಡ್ಡಿ ಆಡಿ ಗೆಲುವು ಸಾಧಿಸಿದೆ. ನಮ್ಮ ತಂಡ ನಂತರ ವಿದೇಶಗಳಲ್ಲಿ ಆಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಮತ್ತು ದೇಶದ ಹೆಸರನ್ನು ಅಜರಾಮರಗೊಳಿಸಿದೆ. ಈ ಮೂಲಕ ಅನೇಕ ಪ್ರಶಸ್ತಿಗಳ ಜೊತೆಗೆ ಅತ್ಯುನ್ನತ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಇದಕ್ಕೆಲ್ಲ ಕಾರಣ ಶ್ರಮ ಮತ್ತು ಸಾಧಿಸುವ ಛಲ ಎಂದು ತಿಳಿಸಿದರು.
Advertisement
Advertisement
ನನ್ನ ಬದುಕಿನ ಚಿತ್ರಣವನ್ನೊಮ್ಮೆ ಹಿಂದುರಿಗಿ ನೋಡಿದರೆ ಇಂದು ಆಶ್ಚರ್ಯವಾಗುತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ಆಕಸ್ಮಿಕವಾಗಿ ಕಬಡ್ಡಿ ಆಟಗಾರನಾಗಿ ಬೆಳೆದೆ. ಸತತ ಸೋಲುಂಡಿದ್ದ ಕರ್ನಾಟಕ ತಂಡವನ್ನು ಗೆಲ್ಲಿಸಿದ ನಂತರ ಉದ್ಯೋಗಗಳು ಅರಸಿಕೊಂಡು ಬಂದವು. ಮೊದಲಿಗೆ ಎಚ್‍ಎಂಟಿ ಗಡಿಯಾರ ಕಂಪನಿಯಲ್ಲಿ, ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಇಂದಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು.
Advertisement
ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ನವೀನ್ ಕುಮಾರ್ ಮತ್ತು ಪ್ರಪಂಜನ್ ಮಾತನಾಡಿ, ತಮ್ಮ ಸಾಧನೆಗೆ ತಂದೆತಾಯಿಗಳ ಆಶೀರ್ವಾದ, ಗುರುಗಳ ಮಾರ್ಗದರ್ಶನ ಬಹಳ ಇದೆ. ನೀವು ಕೂಡ ಗುರುಹಿರಿಯರ ಆಶೀರ್ವಾದದ ಜೊತೆಗೆ ಶ್ರಮವಹಿಸಿದ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
Advertisement
ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಡಾ.ಚೇತನ್, ಪುಣೆಯಲ್ಲಿ ಇಂಜಿನಿಯರ್ ಆಗಿರುವ ಅಶ್ವಿನ್ ಎಂ ಅವರು ಕಬಡ್ಡಿ ಪಟುಗಳು, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.