Connect with us

Corona

ಕೊರೊನಾ ತಡೆಗೆ ನಾಲ್ಕು ಕಡೆಗಳಲ್ಲಿ ದ್ರಾವಣ ಸಿಂಪಡಣೆಯ ಟನಲ್ ಸ್ಥಾಪನೆ

Published

on

ರಾಮನಗರ: ಕೊರೊನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರಗಳಾದ ರಾಮನಗರ ಹಾಗೂ ಚನ್ನಪಟ್ಟಣದ ನಾಲ್ಕು ಕಡೆಗಳಲ್ಲಿ ಕೊರೊನಾ ಸೋಂಕು ನಿವಾರಕ ದ್ರಾವಣ ಸಿಂಪಡಣೆಯ ಟನಲ್ ನಿರ್ಮಾಣ ಮಾಡಿದ್ದಾರೆ.

ರಾಮನಗರದಲ್ಲಿ ಜನಜಂಗುಳಿ ಸೇರುವ ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಮಾರುಕಟ್ಟೆ, ಚನ್ನಪಟ್ಟಣದ ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಮಾರುಕಟ್ಟೆ ಬಳಿ ಕೊರೊನಾ ಸೋಂಕು ನಿವಾರಕ ದ್ರಾವಣ ಸಿಂಪಡಣೆಯ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ನಾಳೆಯಿಂದ ನಾಲ್ಕು ಕಡೆಗಳಲ್ಲೂ ಸಹ ಎರಡು ಎಪಿಎಂಸಿ ಮಾರುಕಟ್ಟೆ, ಎರಡು ರೇಷ್ಮೆ ಮಾರುಕಟ್ಟೆ ಕೇಂದ್ರಗಳಿಗೆ ಬರುವ ಸಾರ್ವಜನಿಕರಿಗೆ ಟನಲ್ ಮೂಲಕ ದ್ರಾವಣ ಸಿಂಪಡಣೆ ಕಾರ್ಯ ನಡೆಯಲಿದೆ.

ಹೊರಭಾಗದಿಂದ ಬರುವ ಹೊರ ಜಿಲ್ಲೆ, ಹೊರ ರಾಜ್ಯದ ಜನರು ನೇರವಾಗಿ ಮಾರುಕಟ್ಟೆಗೆ ಆಗಮಿಸುವ ಮೂಲಕ ಟನಲ್ ಪ್ರವೇಶಿಸಿ ಬರಬೇಕಾಗುತ್ತದೆ. ಆ ಮೂಲಕ ಕೊರೊನಾ ವೈರಸ್ ಹರಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

Click to comment

Leave a Reply

Your email address will not be published. Required fields are marked *