ರಾಮನಗರ: ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು (Boiler Blast) ಗಾಯಗೊಂಡಿದ್ದ 5 ಕಾರ್ಮಿಕರ ಪೈಕಿ ಓರ್ವ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಉಮೇಶ್ ಕುಮಾರ್ ಸಿಂಗ್ (32) ಮೃತ ಕಾರ್ಮಿಕ. ಕಳೆದ ಶನಿವಾರ ಬಿಡದಿಯ (Bidadi) ಭೈರಮಂಗಲ ಕ್ರಾಸ್ ಬಳಿ ಇರುವ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಬಾಯ್ಲರ್ ಪೈಪ್ ಸ್ಫೋಟಗೊಂಡು ಐದು ಮಂದಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು, ಈ ಪೈಕಿ ಇಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸಾಧು ಸಂತರೊಂದಿಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು – ಫೆ.4 ರಂದು ಉದ್ಘಾಟನೆ: ಈಶ್ವರಪ್ಪ
ಒಣ ತ್ಯಾಜ್ಯ ಬರ್ನ್ ಆದ ನಂತರ ಬೂದಿ ಹೊರ ಹೋಗುವ ಬಾಯ್ಲರ್ ಪೈಪ್ ಕಟ್ಟಿಕೊಂಡಿದ್ದ ಪರಿಣಾಮ ಕಾರ್ಮಿಕರು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಓಪನ್ ಮಾಡಿದ ಕಾರಣ ಅವಘಡ ಸಂಭವಿಸಿದೆ. ಅಲ್ಲದೇ ಇಂದು ಸಂಜೆ ಘಟನಾ ಸ್ಥಳಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಫೆ.5ಕ್ಕೆ ಚುನಾವಣೆ, ಫೆ.8 ರಂದು ಮತ ಎಣಿಕೆ