LatestDistrictsKarnatakaMain PostRamanagara

ಕನಕಪುರದಲ್ಲಿ ಜಾಗೃತಿಗಾಗಿ ವಾಕ್ ಫಾರ್ ಫಿಟ್ ಇಂಡಿಯಾ ವಾಕಥಾನ್

ರಾಮನಗರ: ವಾಕ್ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ನಗರದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕನಕಪುರದ ಶ್ರೀದೇಗುಲ ಮಠದ ಎಸ್.ಎನ್ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜನೆ ಮಾಡಿತ್ತು. ಕನಕಪುರದ ದೇಗುಲ ಮಠದ ಆವರಣದಿಂದ ಮೂರು ಕಿಲೋಮೀಟರ್ ದೂರದಲ್ಲಿನ ಕರಡಿಗುಡ್ಡೆಯ ಎಸ್ ಎನ್ ಪಬ್ಲಿಕ್ ಸ್ಕೂಲ್ ವರೆಗೆ ವಾಕಥಾನ್ ಅನ್ನು ಆಯೋಜನೆ ಮಾಡಲಾಗಿತ್ತು.

RMG 2 1

ಕನಕಪುರ ಶ್ರೀ ದೇಗುಲದಿಂದ ಕರಡಿಗುಡ್ಡದ ಎಸ್. ಎನ್. ಪಬ್ಲಿಕ್ ಶಾಲೆಯ ಆವರಣದವರೆಗೆ ಜಾಗೃತಿ ವಾಕ್ ಫಾರ್ ಫಿಟ್ ಇಂಡಿಯಾ ವಾಕಥಾನ್ ಗೆ ದೇಗುಲ ಮಠದ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು. ಜಾಗೃತಿ ವಾಕಥಾನ್ ನಲ್ಲಿ ಎರಡು ವಿಭಾಗದಲ್ಲಿ ವಾಕಥಾನ್ ನಡಿಗೆ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. 10 ವರ್ಷದಿಂದ 18 ವರ್ಷದೊಳಗಿನ ಮಕ್ಕಳು, ಬಾಲಕ-ಬಾಲಕಿಯರಿಗೆ ಒಂದು ಹಂತ ಹಾಗೂ 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು, ವಯಸ್ಕರಿಗೆ ಮತ್ತೊಂದು ವಿಭಾಗದಲ್ಲಿ ವಾಕಥಾನ್ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.

RMG 3 1

ಇನ್ನೂ ಎರಡು ಹಂತದಲ್ಲೂ ಸಹ ಸಾಕಷ್ಟು ಯುವ ಪಡೆ, ಮಕ್ಕಳು ಪಾಲ್ಗೊಂಡಿದ್ರು. ವಾಕಥಾನ್ ನಲ್ಲಿ ಮೊದಲು ಸ್ಥಾನಗಳಿಸಿದ ಸ್ಪರ್ಧಿಗಳಿಗೆ ಆಕರ್ಷಕ ಟ್ರೋಪಿ ಹಾಗು ಪ್ರಮಾಣ ಪತ್ರವನ್ನು ನೀಡಲಾಯಿತು. ಅಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸಹ ಪ್ರಮಾಣ ಪತ್ರ ನೀಡುವ ಮೂಲಕ ವಾಕಥಾನ್ ನಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹಿಸಲಾಯಿತು.

RMG 5

ಇದೇ ವೇಳೆ ಮಾತನಾಡಿದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಮಾನವ ಯಾವಾಗಲೂ ಸಹ ಆರೋಗ್ಯವಂತ ನಾಗಿ ಉತ್ಸುಕನಾಗಿರಬೇಕು. ಆರೋಗ್ಯವಂತನಾಗಿರಲು ದೈಹಿಕ ವ್ಯಾಯಾಮ ಅತ್ಯಗತ್ಯ. ಆದರೆ ಇತ್ತೀಚಿನ ತು ಸಮುದಾಯ ದೈಹಿಕ ವ್ಯಾಯಾಮದ ಬದಲು ಅನಾರೋಗ್ಯಕ್ಕೆ ಎಡೆಮಾಡಿಕೊಡುವ ಅನಾರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯ ಓಡಾಟ ಅಗತ್ತಾ?, ಓಡಾಟದಿಂದ ದೇಹದ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ತಿಳಿಸಿದರು.

RMG 4 1

Related Articles

Leave a Reply

Your email address will not be published. Required fields are marked *