ರಾಮನಗರ: ಜ್ಯೂಸ್ ಎಂದು ಮನೆಯಲ್ಲಿದ್ದ ಕೀಟನಾಶಕ ಕುಡಿದು ಪುಟ್ಟ ಕಂದಮ್ಮವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಪುಷ್ಪ ಹಾಗೂ ಹನುಮಂತು ಎಂಬವರ ಪುತ್ರ ಎರಡು ವರ್ಷದ ಯಶ್ವಿಕ್ (2) ಕೀಟ ನಾಶಕ ಸೇವಿಸಿ ಮೃತಪಟ್ಟ ಮಗು. ಜಮೀನಿಗೆ ಸಿಂಪಡಿಸಿ ಉಳಿದಿದ್ದ ಕೀಟನಾಶಕವನ್ನ ಹನುಮಂತು ಮನೆಯಲ್ಲಿ ಇಟ್ಟಿದ್ದರು. ಈ ವೇಳೆ ಮಗು ಆಟವಾಡುವಾಗ ಕೀಟನಾಶಕದ ಬಾಟೆಲ್ ನೋಡಿ ಜ್ಯೂಸ್ ಎಂದು ಭಾವಿಸಿ ಕುಡಿದಿದೆ. ಇದನ್ನೂ ಓದಿ: ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯ ಸಮುದ್ರಪಾಲು
ಕೆಲ ಕ್ಷಣಗಳ ಬಳಿಕ ಹೊಟ್ಟೆನೋವಿನಿಂದ ನರಳಾಡುತ್ತಿದ್ದ ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]