Connect with us

ದೇವರ ಹರಕೆ ಸೇವೆ ತೀರಿಸಲು ಹೋದವರಿಗೆ ಕಚ್ಚಿತು ಹೆಜ್ಜೇನು: 20 ಮಂದಿಗೆ ಗಾಯ

ದೇವರ ಹರಕೆ ಸೇವೆ ತೀರಿಸಲು ಹೋದವರಿಗೆ ಕಚ್ಚಿತು ಹೆಜ್ಜೇನು: 20 ಮಂದಿಗೆ ಗಾಯ

ರಾಮನಗರ: ದೇವರ ಹರಕೆಯ ಸೇವೆ ತೀರಿಸುವ ವೇಳೆ ಅಡುಗೆ ಮಾಡಲು ಹಾಕಿದ್ದ ಬೆಂಕಿಯ ಹೊಗೆಯಿಂದ ಹೆಜ್ಜೇನು ಹಿಂಡು ದಾಳಿ ನಡೆಸಿ 20 ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿಯಲ್ಲಿ ನಡೆದಿದೆ.

ಅವ್ವೇರಹಳ್ಳಿ ಗ್ರಾಮದ ಹೊನ್ನಾದೇವಿ ದೇವತೆಯ ಸೇವೆಯನ್ನು ನಡೆಸಲಾಗುತ್ತಿತ್ತು. ಅಡುಗೆ ಮಾಡಲು ಬೆಂಕಿ ಹಾಕಿದ್ರಿಂದ ಹೊಗೆಯಿಂದ ಹೆಜ್ಜೇನುಗಳು ದಾಳಿ ನಡೆಸಿವೆ. ಘಟನೆಯಲ್ಲಿ 21 ಜನರಿಗೆ ಹೆಜ್ಜೇನು ಕಡಿತವಾಗಿದ್ರೆ ಏಳು ಜನರಿಗೆ ಕಡಿತದಿಂದ ತೀವ್ರವಾಗಿ ಗಾಯವಾಗಿದೆ.

ಹೆಚ್ಚಿನ ಹೆಜ್ಜೇನು ಕಡಿತಕ್ಕೆ ಒಳಗಾದವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ರೆ, ಉಳಿದವರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Advertisement
Advertisement