Connect with us

Bengaluru City

ರಾಜ್ ಶೆಟ್ಟಿ, ರಿಷಿ, ಡ್ಯಾನಿಶ್ ಮತ್ತು ರಾಮನ ಅವತಾರ!

Published

on

ಬೆಂಗಳೂರು: ಕನ್ನಡದಲ್ಲೀಗ ಮಲ್ಟಿ ಸ್ಟಾರ್ ಚಿತ್ರಗಳ ಜಮಾನ ಶುರುವಾಗಿದೆ. ಈ ಹೊತ್ತಿನಲ್ಲಿಯೇ ನಿಧಾನಕ್ಕೆ ತಮ್ಮದೇ ಆದ ಶೈಲಿಯಲ್ಲಿ ಹೆಸರಾಗುತ್ತಿರುವ ನಟರನ್ನು ಒಂದೇ ಚಿತ್ರದಲ್ಲಿ ನಟಿಸುವಂತೆ ಮಾಡೋ ಪ್ರಯತ್ನಕ್ಕೂ ಶ್ರೀಕಾರ ಬಿದ್ದಿದೆ. ಇಂಥಾದ್ದೊಂದು ನವೀನ ಪ್ರಯತ್ನಕ್ಕೆ ರಾಮನ ಅವತಾರ ಚಿತ್ರವೇ ಮೊದಲ ಹೆಜ್ಜೆಯಿಟ್ಟಿದೆ.

ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಇದೀಗ ಕವಲು ದಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಅವರು ರಾಮನ ಅವತಾರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಈ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಏಕಾಏಕಿ ಟೀಸರ್ ಬಿಡುಗಡೆ ಮಾಡಿ ಸರ್ ಪ್ರೈಸ್ ಕೊಟ್ಟಿದೆ. ರಿಷಿ ಈ ಚಿತ್ರದಲ್ಲಿ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಮತ್ತೆರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಚಿತ್ರ. ಆದರೆ ಇದರಲ್ಲಿ ಮಾಮೂಲಿ ಜಾಡನ್ನು ಮೀರಿದ ಶೈಲಿಯ ಹಾಸ್ಯ ಇರಲಿದೆಯಂತೆ. ಅಂತೂ ದೀಪಾವಳಿಯಂದು ಹೊರ ಬಂದಿರೋ ಈ ಟೀಸರ್ ಮೂಲಕ ರಿಷಿ, ಡ್ಯಾನಿಶ್ ಮತ್ತು ರಾಜ್ ಶೆಟ್ಟಿ ಸೇರಿದಂತೆ ಮೂವರು ಒಂದೇ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *