Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟೆಕ್ಕಿ ಕೊಲೆ ಕೇಸ್ – ಶರ್ಮಿಳಾ ಮೊಬೈಲ್ ನೀಡಿದ ಸುಳಿವಿನಿಂದ ಆರೋಪಿ ಬಂಧನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಟೆಕ್ಕಿ ಕೊಲೆ ಕೇಸ್ – ಶರ್ಮಿಳಾ ಮೊಬೈಲ್ ನೀಡಿದ ಸುಳಿವಿನಿಂದ ಆರೋಪಿ ಬಂಧನ

Bengaluru City

ಟೆಕ್ಕಿ ಕೊಲೆ ಕೇಸ್ – ಶರ್ಮಿಳಾ ಮೊಬೈಲ್ ನೀಡಿದ ಸುಳಿವಿನಿಂದ ಆರೋಪಿ ಬಂಧನ

Public TV
Last updated: January 12, 2026 12:06 pm
Public TV
Share
2 Min Read
Ramamurthy Nagar Techie Murder Case
SHARE

– ತಲೆದಿಂಬಿನಿಂದ ಉಸಿರುಗಟ್ಟಿಸಿ, ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿದ್ದ 18ರ ಯುವಕ

ಬೆಂಗಳೂರು: ಇಲ್ಲಿನ ರಾಮಮೂರ್ತಿ ನಗರದಲ್ಲಿ (Ramamurthy Nagar) ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಶರ್ಮಿಳಾ ಫೋನ್ ನೀಡಿದ ಸುಳಿವಿನಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಮೂಲತಃ ಮಂಗಳೂರಿನವರಾದ ಶರ್ಮಿಳಾ ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು. ಇದನ್ನೂ ಓದಿ: ಉಸಿರುಗಟ್ಟಿ ಟೆಕ್ಕಿ ಸಾವು ಕೇಸ್‌ಗೆ ಟ್ವಿಸ್ಟ್ – ಪ್ರೀತಿ ನಿರಾಕರಿಸಿದ್ದಕ್ಕೆ 18ರ ಯುವಕನಿಂದ ಹತ್ಯೆಯಾದ ಶರ್ಮಿಳಾ

ಈ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ UDR (ಅಸ್ವಾಭಾವಿಕ ಸಾವು) ದಾಖಲಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕೊಲೆ ಎನ್ನುವ ರೀತಿ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಶರ್ಮಿಳಾ ಮೃತಪಟ್ಟ ಮೂರು ದಿನಗಳ ಬಳಿಕ ಆಕೆಯ ಮೊಬೈಲ್ ಆನ್ ಆಗಿತ್ತು. ಈ ವೇಳೆ ಅನುಮಾನಗೊಂಡ ಪೊಲೀಸರು, ಆ ಮೊಬೈಲ್‌ನ ಟವರ್ ಲೊಕೇಷನ್ ಪರಿಶೀಲಿಸಿದಾಗ ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ನ ಪಕ್ಕದ ಮನೆ ತೋರಿಸಿತ್ತು. ಆಗ ಪೊಲೀಸರು ತಕ್ಷಣ ಆರೋಪಿ ಕರ್ನಲ್ ಕುರಯ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಘಟನೆ ನಡೆದ ದಿನ ಆಗಿದ್ದೇನು?
ಜ.3ರ ರಾತ್ರಿ ಘಟನೆ ನಡೆದಿದ್ದು, ಜ.5ರಂದು ಬೆಳಕಿಗೆ ಬಂದಿದೆ. ಘಟನೆ ನಡೆದ ದಿನ ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ವಾಸಿಸುತ್ತಿದ್ದ ಫ್ಲ್ಯಾಟ್‌ನ ರೂಮ್‌ವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿತ್ತು. ಇದನ್ನ ನೋಡಿದ ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು.

ಟೆಕ್ಕಿ ಶರ್ಮಿಳಾನ್ನು ಕೊಲೆ ಮಾಡಿದ ಆರೋಪಿ ಕೇರಳ ಮೂಲದ ಹದಿನೆಂಟು ವರ್ಷದ ಕರ್ನಲ್ ಕುರಯ್. ಶರ್ಮಿಳಾ ಹಾಗೂ ಆರೋಪಿ ಅಕ್ಕಪಕ್ಕದ ನಿವಾಸಿಗಳು. ಮೃತ ಶರ್ಮಿಳಾಗಿಂದ ಆರೋಪಿ 16 ವರ್ಷ ಚಿಕ್ಕವನು. ಸಾಮಾನ್ಯವಾಗಿ ಆರೋಪಿ ಕರ್ನಲ್ ಎದುರು ಬಂದಾಗ ಶರ್ಮಿಳಾ ಸ್ಮೈಲ್‌ ಕೊಟ್ಟು ಮಾತನಾಡಿಸುತ್ತಿದ್ದಳು. ಇದನ್ನೇ ಪ್ರೀತಿ ಎಂದುಕೊಂಡಿದ್ದ ಆರೋಪಿ ಆಕೆಯನ್ನು ನಿಜವಾಗಿಯೂ ಪ್ರೀತಿಸಲು ಆರಂಭಿಸಿದ್ದ. ಘಟನೆ ನಡೆದ ದಿನ ರಾತ್ರಿ ಆರೋಪಿ ಮನೆಯ ಟೆರೇಸ್ ಮೂಲಕ ಶರ್ಮಿಳಾ ಪ್ಲಾಟ್‌ಗೆ ಬಂದಿದ್ದ. ಮನೆಯ ಒಳಗೆ ಬಂದವನೇ ಏಕಾಏಕಿ ಶರ್ಮಿಳಾ ಜೊತೆಗೆ ಅನುಚಿತ ವರ್ತನೆ ತೋರಲು ಶುರುಮಾಡಿದ್ದ. ಗಾಬರಿಯಾದ ಶರ್ಮಿಳಾ ಆತನನ್ನು ತಳ್ಳಿ ಕಿರುಚಾಡಿದ್ದಳು. ಇದರಿಂದ ಕೋಪಗೊಂಡ ಆರೋಪಿ ಹಲ್ಲೆ ಮಾಡಿ, ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ವಿಜ್ಞಾನ ವಿದ್ಯಾರ್ಥಿಯಾಗಿದ್ದ ಆರೋಪಿ ಬೆಂಕಿಯಲ್ಲಿ ಸುಟ್ಟರೇ ಸಾಕ್ಷ್ಯ ಉಳಿಯಲ್ಲ ಎಂದು ಭಾವಿಸಿ ದಿಂಬು, ಬೆಡ್‌ಶೀಟ್, ಕೃತ್ಯದ ವೇಳೆ ಬಳಸಿದ ಎಲ್ಲ ವಸ್ತುಗಳನ್ನ ರೂಂನಲ್ಲಿ ಹಾಕಿ ಬೆಂಕಿ ಹಚ್ಚಿದ್ದ. ಬಳಿಕ ಹೋಗುವಾಗ ಶರ್ಮಿಳಾ ಫೋನ್ ತೆಗೆದುಕೊಂಡು ನಾನು ಸಿಕ್ಕಿ ಹಾಕಿಕೊಳ್ಳಲು ಸಾಧ್ಯವೇ ಇಲ್ಲ ಎಂದುಕೊಂಡು ಎಸ್ಕೇಪ್ ಆಗಿದ್ದ. ಘಟನೆಯಾದ ಬಳಿಕ ಹತ್ಯೆಗೂ ನನಗೂ ಏನು ಸಂಬಂಧವಿಲ್ಲದಂತೆ ಡ್ರಾಮಾ ಮಾಡಿದ್ದ. ಶರ್ಮಿಳಾ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಹಾಗೂ ಫೋನ್ ಕಾಲ್ ಪರಿಶೀಲನೆ ಮಾಡಿದಾಗ ಎಲ್ಲಿಯೂ ಆರೋಪಿಯ ಸುಳಿವು ಇರಲಿಲ್ಲ. ಆದರೆ ಶರ್ಮಿಳಾ ಫೋನ್ ತನ್ನ ಬಳಿಯೇ ಇಟ್ಟುಕೊಂಡಿದ್ದ. ಘಟನೆಯಾದ ಮೂರು ದಿನದ ಬಳಿಕ ಫೋನ್ ಆನ್ ಮಾಡಿ ತನ್ನ ಸಿಮ್ ಹಾಕಿದ್ದಾನೆ. ಫೋನ್ ಆನ್ ಆಗುತ್ತಿದ್ದಂತೆ ಆಕ್ಟೀವ್ ಆದ ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.ಇದನ್ನೂ ಓದಿ: ಬೆಂಗಳೂರು | ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು?

 

TAGGED:bengaluruFire accidentRamamurthy Nagartechieಟೆಕ್ಕಿಬೆಂಕಿ ಅವಘಡಬೆಂಗಳೂರುರಾಮಮೂರ್ತಿ ನಗರ
Share This Article
Facebook Whatsapp Whatsapp Telegram

Cinema news

rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories
Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories

You Might Also Like

Fire accident at Nelamangala godown
Bengaluru City

ನೆಲಮಂಗಲ | ಪರ್ಫ್ಯೂಮ್ ಗೋಡೌನ್‍ನಲ್ಲಿ ಅಗ್ನಿ ಅವಘಡ – ಮುಗಿಲೆತ್ತರಕ್ಕೆ ಹಬ್ಬಿದ ಜ್ವಾಲೆ

Public TV
By Public TV
45 minutes ago
Elephant 1
Chikkamagaluru

ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ – ಹೈರಾಣಾದ ಸಾಕಾನೆಗಳು!

Public TV
By Public TV
56 minutes ago
Elephant Woman Death
Chikkamagaluru

ಮದವೇರಿದ್ದ ಕಾಡಾನೆಗೆ ಮಹಿಳೆ ಬಲಿ – ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

Public TV
By Public TV
2 hours ago
Chandru Lamani
Gadag

ಚಂದ್ರು ಲಮಾಣಿ & ಗುತ್ತಿಗೆದಾರ ನಡುವಿನ ಆಡಿಯೋ ಸ್ಫೋಟ

Public TV
By Public TV
2 hours ago
Tanushka Ludo Death
Crime

ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿ ಸಾವು

Public TV
By Public TV
3 hours ago
Shikhar Dhawan Sophie Shine Marriage
Cricket

ಗರ್ಲ್‌ಫ್ರೆಂಡ್‌ ಸೋಫಿ ಶೈನ್‌ ಜೊತೆ ಶಿಖರ್‌ ಧವನ್‌ ವಿವಾಹ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?