ಬೆಂಗಳೂರು: ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಕೈಬಿಟ್ಟ ಆರೋಪದಲ್ಲಿ ರಾಮಮೂರ್ತಿ ನಗರ ಠಾಣೆ ಇನ್‌ಸ್ಪೆಕ್ಟರ್ ಸೇರಿದಂತೆ 6 ಸಿಬ್ಬಂದಿ ಅಮಾನತು ಮಾಡಲಾಗಿದೆ.
ಇನ್‌ಸ್ಪೆಕ್ಟರ್ ಮುತ್ತುರಾಜ್, ಪಿಎಸ್ಐ ಉಮೇಶ್, ಎಎಸ್ಐ ಮಹೇಶ್ ಹಾಗೂ ಪೈರೋಜ್ ಖಾನ್, ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್, ಕಾನ್‌ಸ್ಟೇಬಲ್ ಬಸವರಾಜ್ ಅಮಾನತು ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
- Advertisement
ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನ ಹಣ ಪಡೆದು ಬಿಟ್ಟಿದ್ದು ಹಾಗೂ ಗಾಂಜಾ ಆರೋಪಿಯಿಂದ ಹಣ ಪಡೆದು ಯಾವುದೇ ದೂರು ದಾಖಲಿಸದೇ ಇದ್ದ ಆರೋಪ ಕೇಳಿಬಂದಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪದಲ್ಲಿ ಸತ್ಯಾಂಶ ಕಂಡು ಬಂದ ಹಿನ್ನೆಲೆ ಅಮಾನತು ಮಾಡಲಾಗಿದೆ.
- Advertisement
ಇನ್‌ಸ್ಪೆಕ್ಟರ್ ವಿರುದ್ಧ ಕಮಿಷನರ್ ದಯಾನಂದ್‌ಗೆ ರಾಮಮೂರ್ತಿನಗರ ಠಾಣೆ ಸಿಬ್ಬಂದಿ ಪತ್ರ ಬರೆದಿದ್ದರು. ಈ ಸಂಬಂಧ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಕಮಿಷನರ್ ಸತೀಶ್ ಕುಮಾರ್ ತನಿಖೆ ನಡೆಸಿದ್ದರು.